ಕೆ ವಿ ಕುಂಞ ರಾಮನ್ ಸಿಪಿಐಎಂ ಮಂಜೇಶ್ವರ ಏರಿಯಾ ಕಾಯ೯ದಶಿ೯ಯಾಗಿ ಆಯ್ಕೆ
ಮಂಜೇಶ್ವರ: ಸಿಪಿಐಎಂ ಮಂಜೇಶ್ವರ ಏರಿಯಾ ಕಾಯ೯ದಶಿ೯ಯಾಗಿ ಕೆ ವಿ ಕುಂಞ ರಾಮನ್ ಎರಡನೇ ಭಾರಿಗೆ ಆಯ್ಕೆಯಾಗಿದ್ದಾರೆ. ಏರಿಯಾ ಸಮಿತಿಗೆ 17 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅಬ್ದುಲ್ ರಜಾಕ್ ಚಿಪ್ಪಾರು, ಡಿ ಬೂಭ, ಸಿ ಅರವಿಂದ, ಬೇಬಿ ಶೆಟ್ಟಿ, ಭಾರತಿ ಎಸ್, ಡಿ ಕಮಾಲಕ್ಷ, ಬಿ ಪುರುಷೋತ್ತಮ, ಚಂದ್ರಹಾಸ ಶೆಟ್ಟಿ, ಕೆ ಕಮಾಲಕ್ಷ, ಸಾದಿಕ್ ಚೆರುಗೋಳಿ, ನವೀನ್ ಕುಮಾರ್, ಮೊಯಿದಿನ್ ಬಂದಿಯೊಡು, ಹಾರೀಶ್ ಪೈವಳಿಕೆ, ವಿನಯ ಕುಮಾರ್, ಟಿ ರಾಮಚಂದ್ರನ್ ಏರಿಯಾ ಕಮಿಟಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕೇರಳ ಸರಕಾರ ಅನುವದಿಸಿದ ಪೈವಳಿಕೆ ಪೊಲೀಸ್ ಠಾಣೆ ಕೂಡಲೇ ಸ್ಥಾಪಿಸಬೇಕು, ಪೈವಳಿಯಲ್ಲಿ ಐಟಿಐ ಕಾಲೇಜು ಸ್ಥಾಪಿಸಬೇಕು, ವಕಾ೯ಡಿ ಪಂ ವ್ಯಾಪ್ತಿಯಲ್ಲಿ ಸರಕಾರಿ ಹೈಸ್ಕೂಲ್ ಆರಂಭಿಸಬೇಕು, ಮಿಂಜದಲ್ಲಿ ಕೆಎಸ್ಇಬಿ ಸೆಕ್ಷನ್ ಕಚೇರಿ ಆರಂಭಿಸಬೇಕು, ಪೊಸಡಿ ಗುಂಪೆಯನ್ನು ಪ್ರವಾಸಿ ಕೇಂದ್ರವಾಗಿ ಮಾಪ೯ಡಿಸಬೇಕು , ಮುಡಿಪು – ಸುಂಕದಕಟ್ಟೆ – ಪೈವಳಿಕೆ ಮಲೆನಾಡು ಹೈವೆ ಮೂಲಕ ಕೆಎಸ್‌ಆರ್ ಟಿಸಿ ಬಸ್ ಆರಂಭಿಸಬೇಕು ಎಂಬ ಬೇಡಿಕೆಯನ್ನು ಏರಿಯ ಸಮಿತಿ ಸಭೆಯಲ್ಲಿ ಮಂಡಿಸಲಾಯಿತು.
ಮಜೀರ್ಪಳ್ಳದ ಅಬೂಬಕ್ಕರ್ ಸಿದ್ದಿಕ್ ನಗರದಲ್ಲಿ ನಡೆದ ಸಾವ೯ಜನಿಕ ಸಮ್ಮೆಳನವನ್ನು ಸಿಪಿಐಎಂ ಜಿಲ್ಲಾ ಕಾಯ೯ದಶಿ೯ ಎಂವಿ ಬಾಲಕೃಷ್ಣನ್ ಮಾಸ್ತರ್ ಉದ್ಘಾಟಿಸಿದರು.ಕೆವಿ ಕುಂಞ ರಾಮನ್ ಅಧ್ಯಕ್ಷತೆ ವಹಿಸಿದರು. ರಮೇಶನ್ ಶುಭಾಷoಶನೆಗೈದರು. ಡಿ ಬೂಬ ಸ್ವಾಗತಿಸಿದರು.ಕೆ ರಮೆಶನ್ ಕ್ರಡನ್ಶಿಯಲ್ ವರದಿ ನೀಡಿದರು. ಕಾಯ೯ಕ್ರಮದಲ್ಲಿ ಶಾಸಕರಾದ ಸಿಎಚ್ ಕುಂಞಂಬು, ಎಂ ಶಂಕರ ರೈ ಸಹಿತ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.





