March 15, 2025

ಗೋವಿಂದ ಪೈ ಕಾಲೇಜು ಭಾಷಾಂತರಕಾರರ 4ನೇ ಸಮಾವೇಶದ ಸಮಾರೋಪ

0

ಮಂಜೇಶ್ವರ: ಗೋವಿಂದ ಪೈ ಕಾಲೇಜಿನಲ್ಲಿ ಭಾಷಾಂತರ ಅಧ್ಯಯನ ವಿಭಾಗ ಹಂಪಿ ವಿಶ್ವವಿದ್ಯಾನಿಲಯ ಹಾಗೂ ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಗೋವಿಂದ ಪೈ ಕಾಲೇಜಿನಲ್ಲಿ ಬಾಷಂತರಕಾರರ ನಾಲ್ಕನೇ ಸಮಾವೇಶ ಕಳೆದ ಸೋಮವಾರದಿಂದ ಆರಂಭಗೊಂಡಿದ್ದು, 3 ದಿನಗಳ ಸಮಾವೇಶ ಸಮಾಪ್ತಿಗೊಂಡಿದೆ.

 

 

ಫೆ 17 ರಂದು ನಡೆದ ಕಾರ್ಯಕ್ರಮದಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆಗೊಂಡಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ: ಡಿ.ವಿ. ಪರಮಶಿವ ಮೂರ್ತಿ ನಿರ್ವಹಿಸಿದ್ದು ಕಾಲೇಜು ಪ್ರಾಚಾರ್ಯರಾದ ಡಾ. ಮುಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಭಾಷ್ ಪಟ್ಟಾಜೆ, ವಿಶ್ವನಾಥ ನಾಗಠಾಣ, ಮೋಹನ್ ಕುಂಠಾರು, ಎಸ್ ಡಿ ಎಂ ಕಾಲೇಜು ಉಜಿರೆ ಸಹ ಪ್ರಾಧ್ಯಾಪಕರಾದ ಡಾ. ರಾಜಶೇಖರ ಹಳೆಮನೆ, ಡಾ. ಅರುಣ್ ಕುಮಾರ್ ಎಸ್ ಆರ್ ಉಡುಪಿ, ವಿಕಾಸ್ ಹೊಸಮನಿ ತಾರನಾಥ ವರ್ಕಾಡಿ ಮೊದಲದವರು ಉಪಸ್ಥಿತರಿದ್ದರು.

ಫೆ 18 ರಂದು ಬೆಳಗ್ಗೆ ಆರಂಭಗೊಂಡ ಬಾಷಂತರಕಾರರ ನಾಲ್ಕನೇ ಸಮಾವೇಶದ ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ: ಡಿ.ವಿ. ಪರಮಶಿವ ಮೂರ್ತಿ ನಿರ್ವಹಿಸಿದರು. ಕಾಲೇಜು ಪ್ರಾಚಾರ್ಯರಾದ ಡಾ ಮುಹಮ್ಮದಾಲಿ ಅಧ್ಯಕ್ಷತೆ ವಹಿಸಿದರು.

ಕಾರ್ಯಕ್ರಮದಲ್ಲಿ ವಿಮರ್ಶಕರಾದ ಯು ಮಹೇಶ್ವರಿ, ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯರಾದ ಸಜಿತ್ ಕುಮಾರ್, ಉಪ ಪ್ರಾಂಶುಪಾಲರಾದ ಸಚಿಂದ್ರನ್, ಅಗ್ನೇ ಶಾಯಿ, ಡಾ ಎಂ ಮಲ್ಲಿಕಾರ್ಜುನ ಗೌಡ, ಕಾಲೇಜು ಯುನಿಯನ್ ಚೆಯರ್ಮೇನ್ ದಾವೂದು, ಎಂ ಮೋಹನ ಕುಂಟಾರ್ , ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ್ ಉಪಸ್ಥಿತರಿದ್ದರು. ಸಮರೋಪ ಕಾರ್ಯಕ್ರಮ ಫೆ 19 ಇಂದು ನಡೆದಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಪಿ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಡಾ ಎ ಮೋಹನ ಕುಂಟಾರ್ ವಹಿಸಿದರು. ತಾಳ್ತಾಜೆ ವಸಂತ ಕುಮಾರ್, ಡಾ ಪ್ರಮೀಳ ಮಾಧವನ್, ಚಿನ್ನಾ ಕಾಸರಗೋಡು, ಕಸಾಪ ಅಧ್ಯಕ್ಷರಾದ ಜಯಪ್ರಕಾಶ್ ತೊಟ್ಟತ್ತೋಡಿ, ಕಾಲೇಜಿನ ಉಪನ್ಯಾಸಕರಾದ ಡಾ ಸುಜೀಶ್ ಎಸ್, ಜಯಂತಿ ಕೆ, ಕಾಲೇಜಿನ ಸುಪರಿಂಟೆಂಡೆಂಟ್ ದಿನೇಶ್ ಕೆ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾನಿಲಯ 60 ವಿದ್ಯಾರ್ಥಿಗಳು ಭಾಗವಹಿಸಿದ್ದು, ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!