ಜೈ ಶ್ರೀರಾಮ್ ಎಂದು ಹೇಳಿದ ಕೂಡಲೇ ಹಿಂದುತ್ವ ಆಗುವುದಿಲ್ಲ: ಸಂಘಪರಿವಾರದ ಮುಖಂಡ ಡಾ.ಎಂ.ಕೆ.ಪ್ರಸಾದ್

ಪುತ್ತೂರು: ಈಗಿನ ಮಕ್ಕಳಿಗೆ ಜೈ ಶ್ರೀರಾಮ್ ಅಂದ ಕೂಡಲೇ ಹಿಂದುತ್ವ ಅಂದುಕೊಂಡಿದ್ದಾರೆ. ಜೈ ಶ್ರೀರಾಮ್ ಅಂತ ಕೆಸರಿ ಬಟ್ಟೆ ತಿರುಗಿಸಿದ ಕೂಡಲೇ ಹಿಂದುತ್ವ ಆಗುವುದಿಲ್ಲ ಎಂದು ಸಂಘಪರಿವಾರ ಮುಖಂಡ ಡಾ ಎಂ ಕೆ ಪ್ರಸಾದ್ ಹೇಳಿದ್ದಾರೆ.
ಈಗ ಜನ ಕೇವಲ ಸ್ವಾರ್ಥಕ್ಕಾಗಿ ಹಿಂದುತ್ವವನ್ನು ಮಾಡುತ್ತಿದ್ದಾರೆ. ಈಗಿನ ಮಕ್ಕಳಿಗೆ ಜೈ ಶ್ರೀರಾಮ್ ಹೇಳಿದ ಕೂಡಲೇ ಹಿಂದುತ್ವ ಎಂದು ತಿಳಿದುಕೊಂಡಿದ್ದಾರೆ. ಆದರೆ ಹಿಂದುತ್ವಕ್ಕೋಸ್ಕರ ತ್ಯಾಗ, ಸರ್ವಸ್ವವನ್ನೂ ದಾನ, ದೇಶಭಕ್ತಿ ಇದ್ದರೆ ಮಾತ್ರ ಅದು ಹಿಂದುತ್ವ ಆಗುತ್ತದೆ. ಇಂದಿನ ಪೀಳಿಗೆಗೆ ಹಿಂದುತ್ವ ಅಂದರೆ ಏನು ಅನ್ನೋದೇ ತಿಳಿದಿಲ್ಲ ಎಂದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಳೆಸಲು ಹಿರಿಯರು ತುಂಬಾ ಶ್ರಮ ಪಟ್ಟಿದ್ದಾರೆ, ಪೋಲೀಸ್ ಲಾಠಿಯೇಟು, ಗೂಂಡಾಗಳ ಒದೆ ತಿಂದಿದ್ದಾರೆ. ಪೋಲೀಸರಿಂದ ಬಂಧಿಸಲ್ಪಟ್ಟವರನ್ನು ಬಿಡಿಸಲು ಬಿಕ್ಷೆ ಎತ್ತಿದ್ದಾರೆ, ಅದು ನೈಜ ಹಿಂದುತ್ವವಾಗಿತ್ತು, ಆದರೆ ಇಂದು ಜೈ ಶ್ರೀರಾಮ್, ಕೇಸರಿ ಶಾಲನ್ನು ತಿರುಗಿಸಿದವರೇ ದೊಡ್ಡ ಜನಗಳು ಎಂದು ತಿಳಿದುಕೊಂಡಿದ್ದಾರೆ. ಬೇರೆ ಪಕ್ಷದವರನ್ನು ತಂದು ಬಿಜೆಪಿಯ ನೈಜ ಮಾಣಿಕ್ಯಗಳನ್ನು ಮರೆಯಲಾಗಿದೆ, ಇದರಿಂದಾಗಿಯೇ ಪುತ್ತೂರಿನಲ್ಲಿ ಬಿಜೆಪಿ ಸೋತಿದೆ ಎಂದರು.