ಅಂಜುಮನ್ ಇಸ್ಲಾಂ ಕಮಿಟಿಯ ನವೀಕರಣಕ್ಕಾಗಿ 1.50 ಲಕ್ಷ ರೂ. ಲಂಚಕ್ಕೆ ಬೇಡಿಕೆ: ವಕ್ಫ್ ಬೋರ್ಡ್ ಆಡಿಟರ್ ಸಹಿತ ಇಬ್ಬರು ಲೋಕಾಯುಕ್ತ ಬಲೆಗೆ
ವಿಜಯಪುರ: ವಕ್ಫ್ ಕಮಿಟಿಯೊಂದರ ನವೀಕರಣ ಮಾಡಲು ಒಂದೂವರೆ ಲಕ್ಷ ರೂ. ಲಂಚದ ಪಡೆಯುತ್ತಿದ್ದಾಗ ವಕ್ಫ್ ಬೋರ್ಡ್ ಆಡಿಟರ್ ಹಾಗೂ ಆತನ ಸಹೋದರನನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಕ್ಫ್ ಬೋರ್ಡ್ ನ ಆಡಿಟರ್ ಮಹಮ್ಮದ್ ಮೊಸಿನ್ ಜಮಖಂಡಿ ಮತ್ತು ಈತನ ಸಹೋದರ ಮುಜಾಹಿದ್ ಜಮಖಂಡಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಂಜುಮನ್ ಇಸ್ಲಾಂ ಕಮಿಟಿಯ ನವೀಕರಣಕ್ಕಾಗಿ ಒಂದೂವರೆ ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಈ ಬಗ್ಗೆ ದೂರು ಆಧರಿಸಿ, ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ.




