March 16, 2025

ಸಾಲ ವಸೂಲಿಗೆ ಬಂದಿದ್ದ ಬ್ಯಾಂಕ್ ಉದ್ಯೋಗಿಯನ್ನೇ ಮದುವೆಯಾದ ಯುವತಿ

0

ಬಿಹಾರ:ಬ್ಯಾಂಕ್‌ನಲ್ಲಿ ಪಡೆದ ಸಾಲವನ್ನು ವಸೂಲಿ ಮಾಡಲು ಬಂದ ಬ್ಯಾಂಕ್ ಉದ್ಯೋಗಿ ಜತೆ ವಿವಾಹಿತೆಯೊಬ್ಬಳು ಓಡಿಹೋಗಿ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ಸಾಲದ ಹಣ ಪಡೆಯಲು ಬ್ಯಾಂಕ್ ಉದ್ಯೋಗಿ ಆಕೆಯ ಮನೆಗೆ ಹೋಗುತ್ತಿದ್ದನು. ಈ ಸಮಯದಲ್ಲಿ ಇಬ್ಬರು ಪ್ರೀತಿಗೆ ಸಿಲುಕಿದ್ದು, ಕಳೆದ 5 ತಿಂಗಳಿಂದ ರಹಸ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಇವರ ವಿವಾಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಇಡೀ ಘಟನೆ ಮಂಗಳವಾರ(ಫೆ.11) ರಂದು ನಡೆದಿದೆ. ವಿವಾಹಿತ ಮಹಿಳ ಜುನಾಯಿ ಮುನ್ಸಿಪಾಲ್ ಕೌನ್ಸಿಲ್‌ನ ಶ್ರೀಪುರಾ ಸಿಂಗ್ ಘಾಟ್‌ನ ಇಂದ್ರ ಕುಮಾರಿ.

 

 

ಇಲ್ಲಿನ ಲಚುವಾಲ್‌ ಪೊಲೀಸ್‌ಠಾಣೆ ವ್ಯಾಪ್ತಿಯ ಜತ್ಕಾಲ್ ಗ್ರಾಮ ನಿವಾಸಿಯಾದ ಬ್ಯಾಂಕ್ ಉದ್ಯೋಗಿ ಪವನ್ ಕುಮಾ‌ರ್ ಎಂದು ಗುರುತಿಸಲಾಗಿದೆ. ಈ ಇಬ್ಬರು ವುರಾ ಸಿಂಗ್ ಘಾಟ್‌ನ ಬಾಬಾ ಭೂಥೇಶ್ವರ್‌ನಾಥ್ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದಾರೆ. ಬ್ಯಾಂಕ್‌ನಿಂದ ಸಾಲ ಪಡೆದಿದ್ದ ಮಹಿಳೆ, ಪವನ್ ಕುಮಾರ್ ಬ್ಯಾಂಕಿನ ಆಕೌಂಟ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಾನೆ. ವಿವಾಹಿತ ಮಹಿಳೆ ಇಂದ್ರ ಕುಮಾರಿ ಸಾಲ ಪಡೆದಿದ್ದರು

Leave a Reply

Your email address will not be published. Required fields are marked *

error: Content is protected !!