March 16, 2025

ಪಟಾಕಿ ಸದ್ದಿಗೆ ರೊಚ್ಚಿಗೆದ್ದ ಆನೆಗಳು: ಕಾಲ್ತುಳಿತಕ್ಕೆ ಮೂವರು ಬಲಿ

0

ಕೇರಳ: ಕೇರಳದ ಕೋಝಿಕ್ಕೋಡ್ ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಗುರುವಾರ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಎರಡು ಆನೆಗಳು ರೊಚ್ಚಿಗೆದ್ದು ಗಲಾಟೆ ನಡೆಸಿದ ಕಾರಣದಿಂದಾಗಿ ಮೂವರು ಸಾವನಪ್ಪಿ ಹಲವರು ಗಾಯಗೊಂಡ ಘಟನೆ ಕೊಯಿಲಾಂಡಿಯ ಕುರುವಂಗಾಡ್‌ನಲ್ಲಿರುವ ಮಂಕುಲಂಗರ ದೇವಸ್ಥಾನದಲ್ಲಿ ನಡೆದ ಉತ್ಸವದ ಸಂದರ್ಭದಲ್ಲಿ ನಡೆದಿದೆ.

ಮೃತರನ್ನು ಲೀಲಾ, ಅಮ್ಮಕುಟ್ಟಿ ಅಮ್ಮ ಮತ್ತು ರಾಜನ್ ಎಂದು ಗುರುತಿಸಲಾಗಿದೆ. ಆನೆಗಳು ಕೆರಳಿದಾಗ, ಕಾಲ್ತುಳಿತ ಸಂಭವಿಸಿ, ಮೂರು ಜನರು ಸಾವನ್ನಪ್ಪಿದರು. ಕಾಲ್ತುಳಿತದಲ್ಲಿ ಸುಮಾರು ಮೂವತ್ತು ಜನರು ಗಾಯಗೊಂಡಿದ್ದು, ಅವರಲ್ಲಿ 8 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಮತ್ತು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!