ಮುಸುಕುಧಾರಿ ಗ್ಯಾಂಗ್ ದಾಳಿ: ಓರ್ವ ವ್ಯಕ್ತಿ ಮೃತ್ಯು

ವಿಜಯಪುರ: ಮುಸುಕುಧಾರಿ ಗ್ಯಾಂಗ್ ದಾಳಿಯಿಂದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.
ಸಾವಿಗೀಡಾದ ವ್ಯಕ್ತಿಯನ್ನು ನಗರದ ಜೈನಾಪುರ ಲೇಔಟ್‌ನ ಸಂತೋಷ್ ಕನ್ನಾಳ ಎಂದ ಗುರಿತಿಸಲಾಗಿದೆ. ಜ.16 ರಂದು ಸಂತೋಷ್ ಮನೆಗೆ ದರೋಡೆಕೋರರು ನುಗ್ಗಿದ್ದರು.
ಈ ವೇಳೆ ದರೋಡೆಕೊರರೊಂದಿಗೆ ಸಂತೋಷ್ ಹೋರಾಡಿದ್ದರು. ಈ ವೇಳೆ ದರೋಡೆಕೋರರು ಚಾಕುವಿನಿಂದ ಅವರ ಎದೆ ಹಾಗೂ ಬೆನ್ನಿಗೆ ಇರಿದು ಮೊದಲನೇ ಮಹಡಿ ಮೇಲಿಂದ ಕೆಳಗೆ ಎಸೆದಿದ್ದರು.
ಹಲ್ಲೆಯ ಬಳಿಕ ಪತ್ನಿ ಭಾಗ್ಯಜ್ಯೋತಿ ಕೊರಳಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ಸಂತೋಷ್ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿತ್ತು. ಅವರ ಕಿಡ್ನಿಗೆ ಸೊಂಕು ತಗುಲಿದ ಹಿನ್ನೆಲೆ ಚಿಕತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.