ವಿಮಾನ ಟಿಕೆಟ್ ದರ, ಚಿನ್ನ ಬೆಲೆಯಲ್ಲಿ ಏರಿಕೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2025-26ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲಾ ವಸ್ತುಗಳು ದುಬಾರಿಯಾಗಿದೆ ಎಂಬ ವಿವರ ಇಲ್ಲಿದೆ.
ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ, ನೇಯ್ದೆಯ ಬಟ್ಟೆಗಳು, ಐಶಾರಾಮಿ ಸರಕುಗಳು, ಆಲೋಹಾಲ್, ತಂಬಾಕು, ಅನಗತ್ಯ ಆಮದು ವಸ್ತುಗಳು, ಟೆಲಿಕಾಂ ಉಪಕರಣ, ಸಿಗರೇಟ್, ಚಿನ್ನ, ಬೆಳ್ಳಿ ಆಮದು ಸುಂಕ ಏರಿಕೆ, ವಿಮಾನ ಇಂಧನ, ವಿಮಾನ ಟಿಕೆಟ್ ದರ ಈ ವಸ್ತುಗಳು ದುಬಾರಿಯಾಗಿದೆ.