ಮಂಗಳೂರು: ನೆತ್ತರಕೆರೆ ಸಿನಿಮಾ ತಂಡ ಹಾಕಿದ್ದ ಬಾರ್ ಸೆಟ್ ಬೆಂಕಿಗಾಹುತಿ
![](https://prathidina.com/wp-content/uploads/2025/01/image_editor_output_image-119999323-1738058079519.jpg)
ಮಂಗಳೂರು: ನೆತ್ತರಕೆರೆ ಸಿನಿಮಾ ತಂಡ ಹಾಕಿದ್ದ ಬಾರ್ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿನಿಮಾ ಬಾರ್ ಸೆಟ್ ಒಂದು ಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಮಂಗಳೂರು ಹೊರವಲಯದಲ್ಲಿ ನೆತ್ತರಕೆರೆ ಚಿತ್ರ ಶೂಟಿಂಗ್‌ಗೆ ಹಾಕಿದ್ದ ಬಾರ್ ಸೆಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಚಿತ್ರತಂಡದ ಸದಸ್ಯರು ಟ್ಯಾಂಕರ್ ನೀರಿನ ಮೂಲಕ ಬೆಂಕಿ ನಂದಿಸಿದ್ದಾರೆ. ಸಿನಿಮಾ ಬಾರ್ ಸೆಟ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಕಾಂತಾರ ಸಿನಿಮಾ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ನಟನೆಯ ಸಿನಿಮಾ ಇದಾಗಿದ್ದು, ಮಂಗಳೂರು ಹೊರವಲಯದಲ್ಲಿ ಬಾರ್ ಸೆಟ್ ಹಾಕಲಾಗಿತ್ತು. ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ.