ಮಂಗಳೂರು: ರಿಯಾದ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ನಿಧನ
![](https://prathidina.com/wp-content/uploads/2025/01/image_editor_output_image248246465-1738054113639.jpg)
ಮಂಗಳೂರು: ಸೌದಿ ಅರೇಬಿಯದ ರಿಯಾದ್‌ನಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಕೆಟಿಗ ಮನ್ಸೂರ್ ಮೂಲ್ಕಿ (41) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲತಃ ಮೂಲ್ಕಿ ಬಪ್ಪ ಬ್ಯಾರಿ ದೊಡ್ಡಮನೆಯ ಕುಟುಂಬದವರು. ಮೂಲ್ಕಿ ಕಾರ್ನಾಡಿನ 7-ಸ್ಟಾರ್ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹಾಗೂ ಮಾನೀಷ್ ಯೂತ್ ಕ್ಲಬ್‌ನ ಸದಸ್ಯರಾಗಿದ್ದರು, ವಾಹನ ಚಲಾಯಿಸುವಾಗಲೇ ಹೃದಯಾಘಾತದಿಂದ ನಿಧನರಾದರು ಎಂದು ಹೇಳಲಾಗಿದೆ. ಅಲ್ಲದೆ ಸಾವು ಸಂಭವಿಸುವ 15 ನಿಮಿಷದ ಮೊದಲು ಸುಮಾರು ಅರ್ಧ ಗಂಟೆಗಳ ಕಾಲ ಮೊಬೈಲ್‌ನಲ್ಲಿ ತಾಯಿಯ ಜತೆಗೆ ಮಾತನಾಡಿದ್ದರು.