ಶಿವಮೊಗ್ಗ: ATM ನಲ್ಲಿ ಹಣ ಕಳವಿಗೆ ವಿಫಲ ಯತ್ನ ನಡೆಸಿದ್ದ ಆರೋಪಿಯ ಬಂಧನ
ಶಿವಮೊಗ್ಗದ ನೆಹರು ರಸ್ತೆಯ ಎಟಿಎಂವೊಂದರಲ್ಲಿ ಹಣ ಕಳವಿಗೆ ವಿಫಲ ಯತ್ನ ನಡೆಸಿದ್ದ ಆರೋಪಿಯನ್ನು, ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಕೋಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಿಹಾರ ರಾಜ್ಯದ ಸಾರಸ್ ಜಿಲ್ಲೆ ಸಮಾನಿ ತಾಲೂಕು ಜಲೈ ಗ್ರಾಮದ ನಿವಾಸಿ ಮಹಮ್ಮದ್ ವಸೀಂ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಕಾಂಕ್ರಿಟ್ ಕೆಲಸ ಮಾಡುವವನಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಜ. 27 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.




