ಮಂಗಳೂರು: ಜಪ್ಪಿನಮೊಗರು ಎಕ್ಕೂರಿನಲ್ಲಿ ಗೋದಾಮಿಗೆ ಬೆಂಕಿ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಎಕ್ಕೂರು ನಡುವಿನ ಗೋದಾಮು ಹಾಗೂ ಉಡುಪಿ ಅಲೆವೂರು ಸಮೀಪ ಗೋದಾಮಿನಲ್ಲಿ ರವಿವಾರ ತಡರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದು, ಗೋದಾಮಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ.
ಎಕ್ಕೂರಿನ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಕಾಣಿಸಿಕೊಂಡಿತ್ತು. ಗುಜರಿ ಸಾಮಾಗ್ರಿಗಳು, ಮರದ ಸೆಕೆಂಡ್ ಹ್ಯಾಂಡ್ ಪೀಠೋಪಕರಣಗಳು, ಟಿಂಬರ್, ಪ್ಲಾಸ್ಟಿಕ್ ಸಹಿತ ಇತರ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡ ಲಾಗಿತ್ತು. ಸುದ್ದಿ ತಿಳಿದ ಕೂಡಲೇ ಅಗ್ನಿ ಶಾಮಕ ಸಿಬಂದಿ ಸ್ಥಳಕ್ಕೆ ಧಾವಿಸಿ ಹಲವು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.




