ಕಾರ್ಕಳ: ಬೈಪಾಸ್ ರಸ್ತೆ ಬಳಿ ನಿಲ್ಲಿಸಿದ್ದ ಕಾರಿಗೆ ಏಕಾಏಕಿ ಬೆಂಕಿ
ಕಾರ್ಕಳ: ಇಲ್ಲಿನ ಬೈಪಾಸ್ ರಸ್ತೆ ಬಳಿ ಸೋಮವಾರ ಮಧ್ಯಾಹ್ನ ಆಮ್ಮಿ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ.
ಕಾರಿನ ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದ್ದು, ಕಾರಿನ ಒಳಗೆ ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿಯ ಕೆನ್ನಾಲಿಗೆಗೆ ಜನರು ಬೆಚ್ಚಿ ಬಿದ್ದಿದ್ದರು. ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್, ಸಿಬಂದಿ ರೂಪೇಶ್, ಗಣೇಶ್, ಮುಝಾಂಬಿಲ್, ಭೀಮಪ್ಪ, ನಿತ್ಯಾನಂದ ಕಾರ್ಯಾಚರಣೆಯಲ್ಲಿದ್ದರು.




