ಇನ್‌ಸ್ಟಾಗ್ರಾಂ ಲವ್‍ನಿಂದ ಗೃಹಿಣಿ ಆತ್ಮಹತ್ಯೆ: ಪ್ರಿಯಕರನ ಬಂಧನ

ದಾರವಾಡ: ಇನ್‌ಸ್ಟಾಗ್ರಾಂ ಲವ್‍ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಪ್ರಿಯಕರನನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಧಾರವಾಡದ ಶಿವಳ್ಳಿ ಗ್ರಾಮದ ವಿಜಯ್ ನಾಯ್ಕರ್ ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಶ್ವೇತಾ (23) ವಿಚ್ಛೇದನಕ್ಕೆ ಕಾರಣನಾಗಿದ್ದ. ಮಹಿಳೆ ಪತಿಯನ್ನು ಬಿಟ್ಟು ಬಂದು ಧಾರವಾಡದ ಶ್ರೀನಗರದಲ್ಲಿ ರೂಮ್ ಮಾಡಿಕೊಂಡಿದ್ದಳು. ಆಕೆ ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು.