ಮೀಟರ್ ಬಡ್ಡಿ ದಂಧೆಕೋರರ ಕಿರುಕುಳದಿಂದ ಯುವಕ ಆತ್ಮಹತ್ಯೆ

ಮಂಡ್ಯ: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳದಿಂದ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಕೆ.ಆರ್.ಪೇಟೆಯ ವಳಗೆರೆ ಮೆಣಸ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲೋಹಿತ್ (35) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಆತ ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದ. ಸುಮಾರು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಅಲ್ಲದೇ ಲಕ್ಷ ಲಕ್ಷ ಬಡ್ಡಿ ಕೂಡ ಕಟ್ಟಿದ್ದ. ಆದರೂ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ತಪ್ಪಿರಲಿಲ್ಲ.