ಕುಂಬೋಲ್ ಆಟಕೋಯ ತಂಙಳ್ ಅವರಿಗೆ ಕಾರು ಕೊಡುಗೆ ನೀಡಿದ ಗಂಗಾವಳಿಯ ಜಮಾಅತರು

ಅಂಕೋಲಾ: ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್ ಅವರಿಗೆ ಅಂಕೋಲಾದ ಗಂಗಾವಳಿಯ ಮುಹ್ಯುದ್ದೀನ್ ಜಾಮಿಯಾ ಮಸ್ಜಿದ್ ಇಲ್ಲಿನ ಜಮಾಅತರು ಮತ್ತು ಯುವಕರು ಕಾರು ಉಡುಗೊರೆ ನೀಡಿದ್ದಾರೆ.
ಟಾಟಾ ಕಂಪೆನಿಯ “ಪಂಚ್” ಮೋಡೆಲ್ ಹೊಸ ಕಾರನ್ನು ಗಂಗಾವಳಿಯ ಯುವಕರು ನೀಡಿದ್ದಾರೆ. ಕುಂಬೋಲ್ ತಂಙಳ್ ಅವರು ಕರ್ನಾಟಕ ಹಾಗೂ ಕೇರಳದ ನೂರಾರು ಮಸೀದಿ ಕಮಿಟಿಗಳಿಗೆ ನೇತೃತ್ವ ನೀಡುತ್ತಿದ್ದಾರೆ. ಗಂಗಾವಳಿ ಮಸೀದಿಯ ಗೌರವಾಧ್ಯಕ್ಷರಾಗಿದ್ದಾರೆ. ಈ ಇಳಿ ವಯಸ್ಸಲ್ಲೂ ದೀನಿಗಾಗಿ ದುಡಿಯುತ್ತಿರುವ ತಂಙಳ್ ಅವರಿಗೆ ಗಂಗಾವಳಿ ಯುವಕರು ಸಮಾರಂಭದಲ್ಲಿ ಸನ್ಮಾನಿಸಿ ವಿಶೇಷ ಕೊಡುಗೆ ನೀಡಿ ಗೌರವಿಸಿದ್ದಾರೆ.