ಕಾರ್ಕಳ: ಖಾಸಗಿ ಬಸ್ ಸ್ಕೂಟರ್‌ಗೆ ಢಿಕ್ಕಿ: ಸವಾರ, ಕರಿಯಕಲ್ಲು ನಿವಾಸಿ ಮೃತ್ಯು

ಕಾರ್ಕಳ: ಆನೆಕೆರೆ ಕೆರೆ ಸರ್ಕಲ್ ಬಳಿ ಬೈಪಾಸ್‌ನಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಒಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ. ಕರಿಯಕಲ್ಲು ನಿವಾಸಿ ಅಜ್ಜತ್‌ಉಲ್ಲ (45) ಮೃತಪಟ್ಟ ದುರ್ದೈವಿ.
ಬಸ್ ಢಿಕ್ಕಿಯಾಗಿ ಹಲವು ಮೀಟರ್‌ನಷ್ಟು ಸ್ಕೂಟರ್ ಸಮೇತ ಸವಾರ ರಸ್ತೆಯಲ್ಲಿ ಎಳೆದೊಯ್ದ ಪರಿಣಾಮ ತಲೆ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದರು. ತಾಲೂಕು ಸರಕಾರಿ ಆಸ್ಪತ್ರೆ ಕರೆದೊಯ್ದು, ಅಲ್ಲಿಂದ ಮಣಿಪಾಲಕ್ಕೆ ಚಿಕಿತ್ಸೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು. ಅಜ್ಜತ್ ಅವರು ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಊರಿಗೆ ಆಗಮಿಸಿ ಪಿಗ್ನಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ವಿರುದ್ಧ ದಿಕ್ಕಿನಲ್ಲಿ ಅತೀ ವೇಗವಾಗಿ ಬಸ್ ಬಂದುದ್ದೇ ಸ್ಕೂಟರ್ ಸವಾರನ ಪಾಲಿಗೆ ಮುಳುವಾಗಿದೆ ಎ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.