ಸಾಲಗಾರರ ಕಿರುಕುಳಕ್ಕೆ ಬೇಸತ್ತು ದಂಪತಿ ಸೇತುವೆಗೆ ನೇಣು ಬಿಗಿದು ಆತ್ಮಹತ್ಯೆ

ಬಾಗಲಕೋಟೆ: ಅತಿಯಾದ ಸಾಲದಿಂದ ಮನನೊಂದಿದ್ದ ದಂಪತಿ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೊರವಲಯದಲ್ಲಿ ನಡೆದಿದೆ.
ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ನಿವಾಸಿಗಳಾದ ಮಲ್ಲಪ್ಪ ಮುರುಗೆಪ್ಪ ಲಾಳಿ ಹಾಗೂ ಮಹಾದೇವಿ ಲಾಳಿ ಮೃತ ದಂಪತಿ.
ಮೂಲತಃ ಮುಧೋಳ ತಾಲೂಕಿನ ಸೊರಗಾವಿ ಗ್ರಾಮದವರಾದ ಈ ದಂಪತಿ ಕುಟುಂಬ ನಿರ್ವಹಣೆಗೆ ಹಾಗೂ ಕೃಷಿಗೆ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.ಸಾಲ ತೀರಿಸಲಾಗದೆ ಮನನೊಂದಿದ್ದ ಇವರು ಸಾಯಲು ನಿರ್ಧರಿಸಿದ್ದಾರೆ.