ವಾರದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಲುವೆಯಲ್ಲಿ ಪತ್ತೆ

ಲಕ್ನೋ: ಉತ್ತರ ಪ್ರದೇಶದ ಗುರುಗ್ರಾಮ್‌ನ ವ್ಯಕ್ತಿಯೊಬ್ಬನ ಕೊಳೆತ ಶವ ಗಾಜಿಯಾಬಾದ್‌ನ ಕಾಲುವೆ ಒಂದರಲ್ಲಿ ಪತ್ತೆಯಾಗಿದೆ. ಆತ ಮನೆಯಿಂದ ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೀಡಾದ ವ್ಯಕ್ತಿಯನ್ನು ಪ್ರಿನ್ಸ್ ರಾಣಾ ಎಂದು ಗುರುತಿಸಲಾಗಿದೆ. ಆತ ಉತ್ತರ ಪ್ರದೇಶದ ಬಿಜ್ನೋರ್‌ನವನು. ಗುರುಗ್ರಾಮ್‌ನಲ್ಲಿ ಆ್ಯಪ್ ಅಗ್ರಿಗೇಟರ್‌ನಲ್ಲಿ ಯೋಜನಾ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ.