ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಯುವಕ ಬಲಿ

ವಾಷಿಂಗ್ಟನ್: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ಯುವಕನೋರ್ವ ಬಲಿಯಾದ ಘಟನೆ ಅಮೆರಿಕದ ವಾಷಿಂಗ್ಟನ್ ಡಿಸಿಯ ಗ್ಯಾಸ್ ಸ್ಟೇಷನ್‌ನಲ್ಲಿ ನಡೆದಿದೆ.
ರವಿತೇಜ (26) ಮೃತ ಯುವಕ. ರವಿತೇಜ ಹೈದರಾಬಾದ್‌ನ ಆರ್‌ಕೆ ಪುರಂ ಗ್ರೀನ್ ಹಿಲ್ಸ್ ಕಾಲೋನಿಯ ನಿವಾಸಿಯಾಗಿದ್ದು, ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ 2022ರಲ್ಲಿ ಅಮೆರಿಕಗೆ ತೆರಳಿದ್ದರು. ಶಿಕ್ಷಣ ಮುಗಿಸಿದ ಬಳಿಕ ಅಲ್ಲಿಯೇ ಉದ್ಯೋಗ ಅರಸುತ್ತಿದ್ದರು