ಮೂಡಿಗೆರೆ: ಹೃದಯಾಘಾತದಿಂದ ಬಿಜೆಪಿ ಯುವ ಮುಖಂಡ ಚೇತನ್ ಸಾವು

ಕೊಟ್ಟಿಗೆಹಾರ: ಯುವ ಕೃಷಿಕರೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಹಾದಿಹೋಣಿ ಹೊಸ್ಮನೆಮಕ್ಕಿ ಗ್ರಾಮದ ಕೃಷಿಕ, ಬಿಜೆಪಿ ಯುವ ಮುಖಂಡ ಹೆಚ್.ಆರ್.ಚೇತನ್ (35 ವರ್ಷ) ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಚೇತನ್ ಅವರು ಕೂವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಗೌಡ ಅವರ ಏಕೈಕ ಪುತ್ರರಾಗಿದ್ದರು.
ಚೇತನ್ ಅವರು ಗುರುವಾರ ಬೆಳಿಗ್ಗೆ ಮನೆಯೆದುರು ಕಾಫಿ ಕಣದಲ್ಲಿದ್ಧಾಗ ಹೃದಯಾಘಾತಕ್ಕೋಳಗಾಗಿ ಇದ್ದಕ್ಕಿದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಆಸ್ಪತ್ರೆಗೆ ಹೋಗುವ ದಾರಿಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.