March 26, 2026

ಭದ್ರತಾ ಸಿಬ್ಬಂದಿಗಳು ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ ನಕ್ಸಲರು: 8 ಮಂದಿ ಯೋಧರು ಸಹಿತ 9 ಮಂದಿ ಮೃತ್ಯು

0
1556702264-7184.jpg

ಛತ್ತೀಸ್ ಗಢ: ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳು ತೆರಳುತ್ತಿದ್ದ ವಾಹನವನ್ನು ನಕ್ಸಲರು ಸುಧಾರಿತ ಐಇಡಿ ಸ್ಫೋಟಕ ಬಳಸಿ ಸ್ಫೋಟಿಸಿದ್ದು, 8 ಸೈನಿಕರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಛತ್ತೀಸ್ ಗಢದ ಬಿಜಾಪುರದಲ್ಲಿ ಮಧ್ಯಾಹ್ನ 2.15ಕ್ಕೆ ಸರಿಯಾಗಿ ನಕ್ಸಲರು ವಾಹನ ಸ್ಫೋಟಿಸಿದ ಪರಿಣಾಮ ಎಂಟು ಭದ್ರತಾ ಸಿಬ್ಬಂದಿಗಳು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವರು ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಿಆರ್ ಪಿಎಫ್ ವಾಹನ ತೆರಳುತ್ತಿರುವ ಮಾಹಿತಿ ತಿಳಿದಂತ ನಕ್ಸಲರು ದಾರಿಯಲ್ಲಿ ಐಇಡಿ ಇರಿಸಿ ಸ್ಪೋಟಿಸಿದ್ದಾರೆ. ಬಿಜಾಪುರ ಜಿಲ್ಲೆಯ ಬೇದ್ರೆ-ಕುಟ್ರು ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!