ವಿಟ್ಲ ಶ್ರೀ ದೇವತಾ ಸಮಿತಿ ವತಿಯಿಂದ 55ನೇ ವರ್ಷದ ವಿಟ್ಲ ಶಾರದೋತ್ಸವಕ್ಕೆ ಚಾಲನೆ
ವಿಟ್ಲ: ವಿಟ್ಲ ಶ್ರೀ ದೇವತಾ ಸಮಿತಿ ವತಿಯಿಂದ 55ನೇ ವರ್ಷದ ವಿಟ್ಲ ಶಾರದೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವತಾ ಸಮಿತಿ ಗೌರವಾಧ್ಯಕ್ಷ
ರಾಧಾಕೃಷ್ಣ ನಾಯಕ್ ಧ್ವಜಾರೋಹಣಗೈದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಧರ್ಮದ ಜತೆಗೆ ರಾಷ್ಟ್ರದ ಚಿಂತನೆಯಾಗಿದ್ದು, ದೇವತಾ ಸಮಿತಿ ಅಂತಹ ಕೆಲಸವನ್ನು ಮಾಡುತ್ತಿದೆ. ವಿಟ್ಲದ ಪ್ರತಿಯೊಬ್ಬರು ದೇಶ ಭಕ್ತರಾಗಿದ್ದಾರೆ. ಹಿಂದುಗಳಲ್ಲಿ ಆರಾಧನೆ ಪದ್ದತಿ ಒಂದು. ಆಧ್ಯಾತ್ಮಿಕ ನಂಬಿಕೆ ಶ್ರೇಷ್ಠವಾದದು. ಮಕ್ಕಳಿಗೆ ಸಂಸ್ಕಾರ ಬೆಳೆಸುವ ಕಾರ್ಯ ನಡೆಯಬೇಕು ಎಂದರು.
ಹೈಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್ ಅವರು ಮಾತನಾಡಿ ನಮಗೆ ರಕ್ಷಣೆ ನೀಡುವುದು ದುರ್ಗೆಯಾಗಿದ್ದಾಳೆ. ತತ್ವ ಸಿದ್ದಾಂತದಲ್ಲಿ ನಿಂತಿರುವ ಧರ್ಮ ನಮ್ಮದು. ದೇವರ ಆರಾಧನೆ ನಿರಂತರವಾಗಿ ನಡೆಯಬೇಕು. ರಾಷ್ಟ್ರ ವಿರೋಧಿಗಳು ಎಲ್ಲೆಡೆ ಹರಿದಾಡುತ್ತಿದೆ. ಮಕ್ಕಳಲ್ಲಿ ದೇಶದ, ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದರು.
ದೇವತಾ ಸಮಿತಿ ಅಧ್ಯಕ್ಷ ನರ್ಸಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ 5 ದಿನಗಳ ವರೆಗೆ ಈ ಮಹೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮಕ್ಕಳನ್ನು ಹೆಚ್ಚಾಗಿ ಕರೆ ತರಬೇಕು. ಇದರ ಮೂಲಕ ಮಕ್ಕಳಿಗೆ ಇದರ ಮೂಲಕ ಸಂಸ್ಕಾರ ಕಲಿಸಲು ಸಾಧ್ಯವಾಗುತ್ತದೆ ಎಂದರು.
ನಿರೂಪಕಿ, ಯಕ್ಷಪ್ರಿಯ ಅರ್ಷಿಯಾ ತನು ವಿಟ್ಲ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅರ್ಷಿಯ ಅವರು ಹುಟ್ಟೂರಲ್ಲಿ ಸನ್ಮಾನ ಎಂದರೆ ಅದರ ಖುಷಿಯೇ ಬೇರೆ. ಸೌಹಾರ್ದತೆಗೆ ಒಂದು ಹೆಸರೇ ವಿಟ್ಲ ಆಗಿದೆ. ಆರ್ಶೀರ್ವಾದ ಮತ್ತು ಸಹಕಾರದಿಂದ ಇಂದು ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದಾನೆ. ವಿಟ್ಲದ ಜನರ ಸಹಕಾರದಿಂದ ನಾನಿಂದು ಬೆಳೆದು ನಿಂತಿದ್ದೇನೆ ಎಂದರು.
ಬೆಳಿಗ್ಗೆ ಶಾರದಾ ಮಾತೆಯ ವಿಗ್ರಹವನ್ನು ವಿಟ್ಲ ಜೈನ ಬಸದಿಯಿಂದ ಮೆರವಣಿಗೆ ಮೂಲಕ ಕರೆ ತರಲಾಯಿತು. ವೇದಮೂರ್ತಿ ಶ್ರೀ ಎಂ ವಿಕಾಸ್ ಭಟ್ ಅವರ ನೇತೃತ್ವದಲ್ಲಿ ವಿಟ್ಲ ಅನಂತ ಸದನದಲ್ಲಿ ಮೂರ್ತಿ ಪ್ರತಿಷ್ಠೆ ನಡೆಯಿತು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ. ಗಾಯತ್ರಿ ಗೀತಪ್ರಕಾಶ್, ಉಪಸ್ಥಿತರಿದ್ದರು.
ರಾಘವೇಂದ್ರ ಪೈ ಸ್ವಾಗತಿಸಿದರು.
ತುಳಸೀದಾಸ್ ಶೆಣೈ ಪ್ರಾರ್ಥಿಸಿದರು. ಸುದರ್ಶನ್ ಪಡಿಯಾರ್ ನಿರೂಪಿಸಿದರು. ಜತೆ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ವಂದಿಸಿದರು. ಜ್ಯೋತಿ ಶೆಣೈ ಸನ್ಮಾನ ಪತ್ರ ವಾಚಿಸಿದರು. ಗೋಕುಲ್ ದಾಸ್ ಶೆಣೈ ಸಹಕರಿಸಿದರು.




