ಪ್ರವಾಸಿ ಕೂಟ ವಿಟ್ಲ(ರಿ.) ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ
ಪ್ರವಾಸಿ ಕೂಟ ವಿಟ್ಲ(ರಿ.) ಇದರ ಸದಸ್ಯತ್ವ ಅಭಿಯಾನದ ಪೋಸ್ಟರನ್ನು ಇಂದು ವಿಟ್ಲ ಮೇಗಿನಪೇಟೆಯ ಕಚೇರಿಯಲ್ಲಿ ಸಂಘಟನೆಯ ಅಧ್ಯಕ್ಷರಾದ *ಮಸೂದ್ ವಿಟ್ಲ* ರವರ ನೇತೃತ್ವದಲ್ಲಿ ಅನಾವರಣಗೊಳಿಸಲಾಯಿತು.


ಈ ಸದಸ್ಯತ್ವ ಅಭಿಯಾನವು **ಅಕ್ಟೋಬರ್ 16ರಿಂದ ನವೆಂಬರ್ 16 (2026)ರವರೆಗೆ** ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸಂಘಟನೆಯೊಂದಿಗೆ ಕೈಜೋಡಿಸುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.
ಇದೇ ಸಂದರ್ಭದಲ್ಲಿ, ಮೊದಲ ಬಾರಿಗೆ ಕಚೇರಿಗೆ ಭೇಟಿ ನೀಡಿದ ಇಫ್ತಿಕಾರ್ ಮೇಗಿನಪೇಟೆ QATAR,
ಅನ್ವರ್ ಪೆರುವಾಯಿ QATAR, ಅಶ್ರಫ್ ಕಡಂಬು QATAR, ರಿಯಾಝ್ ಪೆರುವಾಯಿ UAE, ನಾಸಿರ್ ಕಂಬಳಬೆಟ್ಟು UAE, ಮುಸ್ತಫಾ ಕೊಳಂಬೆ KSA, ಇಲ್ಯಾಸ್ ವಿಟ್ಲ KSA ಮತ್ತು ಹಾರಿಸ್ ಮೇಗಿನಪೇಟೆ United Kingdom ರವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ *ಪ್ರವಾಸಿ ಕೂಟ ವಿಟ್ಲ (ರಿ.) ಇದರ ಸ್ಥಾಪಕ ಅಧ್ಯಕ್ಷರಾದ ಸತ್ತಾರ್ ವಿಟ್ಲ, ಉಪಾಧ್ಯಕ್ಷರಾದ ಮೊಹಮ್ಮದ್ ಶಾಫಿ, ಬಹರೈನ್ ಸಮಿತಿಯ ಅಧ್ಯಕ್ಷರಾದ ಶಾಫಿ ಕಂಬಳಬೆಟ್ಟು, ಮಾಧ್ಯಮ ವಕ್ತಾರರಾದ ಝಕರಿಯ ಸಾಲೆತ್ತೂರು ಹಾಗೂ ನವಾಝ್ ಕಡಂಬು* ಉಪಸ್ಥಿತರಿದ್ದರು.




