October 16, 2026

ಅಳಕೆಮಜಲ್ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್‌ನ ನೂತನ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ರಫೀಕ್ ಸ ಅದಿ, ಪ್ರ.ಕಾರ್ಯದರ್ಶಿಯಾಗಿ ಶಾಕೀರ್, ಕೋಶಾಧಿಕಾರಿಯಾಗಿ ಯೂನುಸ್

0
image_editor_output_image-117980742-1792167932505

ವಿಟ್ಲ: ಅಳಕೆಮಜಲ್ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್‌ನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶುಕ್ರವಾರ ಜುಮಾ ನಮಾಝಿನ ಬಳಿಕ ನಡೆಯಿತು.

ಜಮಾಅತ್‌ನ ಮಹಾಸಭೆಯು ಗೌರವಾಧ್ಯಕ್ಷರಾದ ಬಹುಮಾನ್ಯ ಮಸೂದ್ ತಂಙಲ್ ಕೂರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳು:

– ಅಧ್ಯಕ್ಷರು: ರಫೀಕ್ ಸಅದಿ

– ಪ್ರಧಾನ ಕಾರ್ಯದರ್ಶಿ: ಶಾಕಿರ್ 77

– ಕೋಶಾಧಿಕಾರಿ: ಯೂನುಸ್ ಬಗ್ಗುಮೂಳೆ

– ಉಪಾಧ್ಯಕ್ಷರು: ರಝಾಕ್ 77 ಹಾಗೂ ಶಾಫಿ ಅಂತರಗುತ್ತು

– ಜೊತೆ ಕಾರ್ಯದರ್ಶಿಗಳು: ಸೈಫ್, ಜಾಬಿರ್ ಮಜಲ್ ಹಾಗೂ ಹಾರಿಸ್ ಕೋನಿಮಾರ್

– ಲೆಕ್ಕ ಪರಿಶೋಧಕರು: ಮನ್ಸೂರ್ 77, ಬಾತಿಶ್ ಅಳಕೆಮಜಲ್ ಹಾಗೂ ಶಾಕಿರ್ ಮಸ್ಕತ್

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜಮಾಅತ್ ವತಿಯಿಂದ ಶುಭಾಶಯಗಳನ್ನು ಸಲ್ಲಿಸಲಾಯಿತು. ನೂತನ ಸಮಿತಿಯು ಜಮಾಅತ್‌ನ ಏಕತೆ, ಸೌಹಾರ್ದತೆ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಲಾಯಿತು. ಅಲ್ಲಾಹನು ನೂತನ ಪದಾಧಿಕಾರಿಗಳಿಗೆ ಹೆಚ್ಚಿನ ಯಶಸ್ಸು ಮತ್ತು ಸೇವೆ ಸಲ್ಲಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

Leave a Reply

Your email address will not be published. Required fields are marked *

error: Content is protected !!