ಗೋವಾಗೆ ತೆರಳಿದ್ದ ಯುವಕನ ಕೊಲೆ

ಅಮರಾವತಿ: ನ್ಯೂ ಇಯರ್ ಪಾರ್ಟಿಗೆಂದು ಗೋವಾಗೆ ತೆರಳಿದ್ದ ಆಂಧ್ರ ಮೂಲದ ಯುವಕನಿಗೆ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.
ರವಿತೇಜ ಮೃತ ಯುವಕ. ರವಿತೇಜ ಸೇರಿದಂತೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಮ್‌ನ ಸ್ನೇಹಿತರ ಗುಂಪು ಹೊಸ ವರ್ಷದ ಸಂಭ್ರಮಾಚಾರಣೆಯ ಸಲುವಾಗಿ ಗೋವಾಗೆ ತೆರಳಿತ್ತು. ಸ್ನೇಹಿತರ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಜೊತೆ ರೆಸ್ಟೋರೆಂಟ್ ಮಾಲೀಕನ ಪುತ್ರ ಅನುಚಿತವಾಗಿ ವರ್ತಿಸಿದ್ದನ್ನು ರವಿತೇಜ ಪ್ರಶ್ನಿಸಿದ್ದಾನೆ.
ಈ ವೇಳೆ ಜಗಳ ಶುರುವಾಗಿದೆ. ಬಳಿಕ ಜಗಳ ತಾರಕಕ್ಕೇರಿ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ರವಿತೇಜನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ರವಿತೇಜಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರವಿತೇಜ ಮೃತಪಟ್ಟಿದ್ದಾನೆ.