ಮನೆಯಲ್ಲಿ ವುಡ್ ಬಾಕ್ಸ್ ಕೆಫೆಯ ಸಹ-ಸಂಸ್ಥಾಪಕನ ಮೃತದೇಹ ಪತ್ತೆ
ದೆಹಲಿಯ ವುಡ್ ಬಾಕ್ಸ್ ಕೆಫೆಯ ಸಹ-ಸಂಸ್ಥಾಪಕ ಪುನೀತ್ ಖುರಾನಾ ಅವರು ಇಲ್ಲಿನ ಮಾಡೆಲ್ ಟೌನ್‌ನ ಕಲ್ಯಾಣ್ ವಿಹಾರ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಖುರಾನಾ ಮತ್ತು ಅವರ ಪತ್ನಿ ಮಾಣಿಕಾ ಜಗದೀಶ್ ಪಹ್ವಾ ಜೊತೆಗಿನ ವಿಚ್ಛೇದನ ಹಾಗೂ ಕೆಫೆ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ನಡುವೆಯೇ ಈ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ವುಡ್‌ಬಾಕ್ಸ್ ಕೆಫೆ ಹೊಂದಿದ್ದ ದಂಪತಿ ಜಂಟಿಯಾಗಿ ವ್ಯವಹಾರ ನಡೆಸುತ್ತಿದ್ದರು.
ಇಬ್ಬರ ನಡುವೆ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಏರ್ಪಟ್ಟಿತ್ತು. ಅಲ್ಲದೇ ಇಬ್ಬರ ನಡುವೆ ಮೊದಲಿನಿಂದಲೂ ದಾಂಪತ್ಯ ಕಲಹವಿತ್ತು. ಇದೇ ಕಾರಣಕ್ಕೆ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರು 2016ರಲ್ಲಿ ಮದುವೆಯಾಗಿದ್ದರು, ಪತ್ನಿ ಮೇಲೆ ಖುರಾನಾಗೆ ಅಸಮಾಧಾನ ಇತ್ತು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




