ಸಾಕು ನಾಯಿ ಸಾವು ನೊಂದ ಮಾಲೀಕ ನಾಯಿಯ ಚೈನ್ ಬಳಸಿ ಆತ್ಮಹತ್ಯೆ
ನೆಲಮಂಗಲ: ಪ್ರೀತಿಯಿಂದ ಸಾಕಿದ ನಾಯಿ ಮೃತಪಟ್ಟ ನೋವಿನಲ್ಲಿ ಮಾಲೀಕ ನಾಯಿಯ ಚೈನ್ ಬಳಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಹೆಗ್ಗಡದೇವನಪುರದಲ್ಲಿ ಬುಧವಾರ ನಡೆದಿದೆ.
ಗ್ರಾಮದ ರಾಜಶೇಖರ್ (33) ಆತ್ಮಹತ್ಯೆ ಮಾಡಿಕೊಂಡವರು. ರಾಜಶೇಖರ್ ಅವರ ಬಳಿಯಿದ್ದ ಜರ್ಮನ್ ಶೆಫರ್ಡ್ ತಳಿಯ ಸಾಕುನಾಯಿ ‘ಬೌನ್ಸಿ’ ಮಂಗಳವಾರ ಮೃತಪಟ್ಟಿತ್ತು.
ರಾಜಶೇಖರ್ ಅವರು ಒಂಬತ್ತು ವರ್ಷಗಳ ಹಿಂದೆ ನಾಯಿ ಖರೀದಿಸಿ ತಂದು ಪ್ರೀತಿಯಿಂದ ಸಾಕುತ್ತಿದ್ದರು. ಕೆಲವು ದಿನಗಳಿಂದ ಬೌನ್ಸಿ ಅನಾರೋಗ್ಯದಿಂದ ಬಳಲುತ್ತಿತ್ತು. ಮಂಗಳವಾರ ಮೃತಪಟ್ಟಿತ್ತು. ತಮ್ಮ ಜಮೀನಿನಲ್ಲಿ ನಾಯಿಯ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದ ರಾಜಶೇಖರ್ ಅವರು ಬುಧವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಸಾಕು ನಾಯಿ ಮೃತಪಟ್ಟ ನೋವಿನಲ್ಲಿ ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.




