ರಜೆ ನೀಡದ ಅಧಿಕಾರಿಗಳು: ರೈಫಲ್‌ನಿಂದ ಗುಂಡು ಹಾರಿಸಿ ಪೊಲೀಸ್ ಕಮಾಂಡೋ ಆತ್ಮಹತ್ಯೆ
ತಿರುವನಂತಪುರಂ: ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ಗ್ರೂಪ್‌ಗೆ ಸೇರಿದ ಪೊಲೀಸ್ ಕಮಾಂಡೋ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಅರೆಕೋಡ್ ನಲ್ಲಿ ನಡೆದಿದೆ.
ಡಿ.15 ರಂದು ರಾತ್ರಿ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ (ಡಿ.16 ರಂದು) ಹೇಳಿದ್ದಾರೆ. ವಯನಾಡು ಮೂಲದ ವಿನೀತ್ (35) ಮೃತ ಪೊಲೀಸ್ ಕಮಾಂಡೋ.
ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದಲ್ಲಿದ್ದ ವಿನೀತ್ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುವ ಕ್ಯೂಬಿಂಗ್ ಆಪರೇಷನ್‌ನಲ್ಲಿ ನಿರತರಾಗಿದ್ದರು. ಗರ್ಭಿಣಿ ಪತ್ನಿ ಜತೆ ಸಮಯ ಕಳೆಯುವ ನಿಟ್ಟಿನಲ್ಲಿ ವಿನೀತ್ ಉನ್ನತ ಅಧಿಕಾರಿಗಳೊಂದಿಗೆ ರಜೆ ಬೇಕೆಂದು ಮನವಿ ಮಾಡಿದ್ದ. ಆದರೆ ಅಧಿಕಾರಿಗಳಯ ರಜೆ ನೀಡಲು ನಿರಾಕರಿಸಿದ್ದಾರೆ.
ರಜೆಗಾಗಿ 45 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದರು. ಆದರೆ ರಜೆ ಸಿಗದಿದ್ದಾಗ ಸರ್ವಿಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ವಿನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ನಡೆದ ಕೂಡಲೇ ವಿನೀತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತಾದರೂ ಅಷ್ಟೋತ್ತಿಗೆ ಅವರು ಮೃತಪಟ್ಟಿದ್ದಾರೆ.