December 19, 2024

ಕೌಟುಂಬಿಕ ಕಲಹದಿಂದ ಮನನೊಂದು ಕ್ರಿಕೆಟ್ ಪಟು ನೇಣು ಬಿಗಿದು ಆತ್ಮಹತ್ಯೆ

0

ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ಕ್ರಿಕೆಟ್ ಪಟು ನೇಣಿಗೆ ಶರಣಾದ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲರಾಜ್ (41) ಆತ್ಮಹತ್ಯೆಗೆ ಶರಣಾದ ಕ್ರಿಕೆಟ್ ಪಟು. ಹೆಸರಘಟ್ಟ ರಸ್ತೆ ಬಳಿಯ ಸಿಲುವೆಪುರದಲ್ಲಿ ಘಟನೆ ನಡೆದಿದೆ. ಬಾಲರಾಜ್ 18 ವರ್ಷದ ಹಿಂದೆ ಪತ್ನಿ ಕುಮಾರಿಯನ್ನು ಎರಡನೇ ಮದುವೆಯಾಗಿದ್ದ. ಗ್ರಾಮಾಂತರ ಭಾಗದಲ್ಲಿ ಕ್ರಿಕೆಟ್ ಪಟುವಾಗಿದ್ದ ಬಾಲರಾಜ್ ಹೆಂಡತಿ ಕಿರುಕುಳದ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪವನ್ನು ಎದುರಿಸುತ್ತಿದ್ದ.

ಈ ಸಂಬಂಧ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಗಲಾಟೆ ಬಳಿಕ ಬಾಲರಾಜ್ ಪತ್ನಿ ಮನೆ ತೊರೆದು ತವರು ಸೇರಿದ್ದಳು.

 

 

Leave a Reply

Your email address will not be published. Required fields are marked *

error: Content is protected !!