ಬಜಪೆ: ಕಣಜದ ಹುಳುಗಳು ದಾಳಿ: ಪೇಪರ್ ಹಾಕುತ್ತಿದ್ದ ವ್ಯಕ್ತಿ ಸಾವು
ಬಜಪೆ: ಪೇಪರ್ ಹಾಕುತ್ತಿದ್ದ ವ್ಯಕ್ತಿಯ ಮೇಲೆ ಕಣಜದ ಹುಳುಗಳು ನಡೆಸಿದ ಅನಿರೀಕ್ಷಿತ ದಾಳಿಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಂಗಳೂರಿನ ಬಜಪೆ ಪರಿಸರದಲ್ಲಿ ನಡೆದಿದೆ.
ಬಜಪೆ ಸಮೀಪದ ಪೊರ್ಕೋಡಿಯಲ್ಲಿ ನೆವೆಂಬರ್ 24 ರಂದು ಪೇಪರ್ ಹಾಕುವ ಕೆಲಸ ಮಾಡುತ್ತಿದ್ದ ಪುಷ್ಪರಾಜ್ ಶೆಟ್ಟಿ ಎಂಬ ಅಮಾಯಕ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಊರ ಜನರಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ ಪುಷ್ಟರಾಜ್ ಶೆಟ್ಟಿ ಪೊರ್ಕೋಡಿ ಪರಿಸರದಲ್ಲಿ ಯಾವುದೇ ಸಭೆ ಸಮಾರಂಭ ಇರಲಿ, ಸಾಮಾಜಿಕ ಕಾರ್ಯಗಳಿದ್ರೂ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾ ಇದ್ದರು. ಊರಿನ ಎಲ್ಲಾ ಜನರಿಗೆ ಚಿರಪರಿಚತರಾಗಿದ್ದ ಇವರು ದಾರುಣವಾಗಿ ಮೃತಪಟ್ಟಿದ್ದಾರೆ.
ಪೇಪರ್ ಹಾಕಲೆಂದು ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ ನಡೆದ ಆ ಒಂದು ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.