December 4, 2024

ವಿಟ್ಲ: ರಾಷ್ಟ್ರಮಟ್ಟದ ಹ್ಯಾಂಡಬಾಲ್ ಸ್ಪರ್ಧೆಯಲ್ಲಿ ವಿಠಲ ಪ.ಪೂರ್ವ ಕಾಲೇಜ್ ಪ್ರಥಮ: ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ವಿಟ್ಲ: ಅಕ್ಟೋಬರ್ 8ರಿಂದ 10ರವರೆಗೆ ಗೋವಾದಲ್ಲಿ ನಡೆದ ನಾಲ್ಕನೇ YSPA National Federation Cup 2024ರ 17ರ ವಯೋಮಿತಿಯ ಬಾಲಕರ ರಾಷ್ಟ್ರ ಮಟ್ಟದ ಹ್ಯಾಂಡಬಾಲ್ ಪಂದ್ಯಾಟ ದಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನವನ್ನು ಪಡೆದು ನವೆಂಬರ್ 30ರಿಂದ ಡಿಸೆಂಬರ್ 3ರರ ವರೆಗೆ ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ಇವರಿಗೆ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಾಗಿ ರಾಷ್ಟ್ರೀಯ ಮಟ್ಟದ ಹ್ಯಾಂಡಬಾಲ್ ಆಟಗಾರ ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ನಿರ್ದೇಶಕ ಶ್ರೀನಿವಾಸ ಗೌಡ ನೆಕ್ಕಿಲಾರು ಆಯ್ಕೆಯಾಗಿರುತ್ತಾರೆ. ವಿಟ್ಲ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!