ಶಾಲಾ ಮಕ್ಕಳಿದ್ದ ಆಟೋ, ಸ್ಕೂಟಿ ನಡುವೆ ಅಪಘಾತ: ಓರ್ವ ವಿದ್ಯಾರ್ಥಿ ಮೃತ್ಯು
ಚಾಮರಾಜನಗರ : ಶಾಲಾ ಮಕ್ಕಳು ಇರುವ ಆಟೋ ಮತ್ತು ಸ್ಕೂಟಿ ನಡುವೆ ರಸ್ತೆ ಅಪಘಾತವಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಹನೂರು ತಾಲ್ಲೂಕಿನ ಕಾಮಗೆರೆ ಸಮೀಪ ನಡೆದಿರುವುದು ವರದಿಯಾಗಿದೆ.
ಹನೂರು ತಾಲ್ಲೂಕಿನ ಮಂಗಲ ಗ್ರಾಮದ ವಿಮಲ್ ರಾಜ್ (10) ಮೃತ ವಿದ್ಯಾರ್ಥಿ. ಕಾಮಗೆರೆ ಗ್ರಾಮದ ಸೆಂಟ್ ಕ್ಲೀವಿಯರ್ ಶಾಲೆಗೆ 5 ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ನಡೆದು ಆಟೋ ಪಲ್ಟಿಯಾಗಿಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.




