ಓವರ್‌ಟೆಕ್ ಮಾಡುವಾಗ ಬೈಕ್‌ಗೆ ಕಾರು ಢಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಯಾದಗಿರಿ: ಓವರ್‌ಟೆಕ್ ಮಾಡಲು ಹೋಗಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಹಳ್ಳೆಪ್ಪ (45) ಹಾಗೂ ಮಲ್ಲಯ್ಯ (35) ಎಂದು ಗುರುತಿಸಲಾಗಿದೆ.
ಜೇವರ್ಗಿ ತಾಲೂಕಿನ ಚಿಕ್ಕಮುದವಾಳ ಗ್ರಾಮದ ಬಳಿಯಿರುವ ಜಮೀನು ನೋಡಿಕೊಂಡು ಬರಲು ಬೈಕ್‌ನಲ್ಲಿ ತೆರಳಿದ್ದರು. ವಾಪಸ್ ಊರಿಗೆ ಬರುವಾಗ, ಕಾರು ಚಾಲಕ ಬೈಕ್‌ನ್ನು ಓವರ್‌ಟೆಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕಾರು ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.





