November 23, 2026

ವಿಟ್ಲ: ಬಿಜೆಪಿ ಪ್ರತಿಭಟನೆಯ  ಸಂದರ್ಭದ  ಹೇಳಿಕೆಗೆ ತಿರುಗೇಟು ಕೊಟ್ಟ ವಿಟ್ಲ ಬ್ಲಾಕ್ ಕಾಂಗ್ರೆಸ್: ಬೆಳ್ತಂಗಡಿ-ಉಪ್ಪಿನಂಗಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಗ್ಯವಿಲ್ಲದ ಹರೀಶ್ ಪೂಂಜ ಪುತ್ತೂರು ಶಾಸಕ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ: ಪದ್ಮನಾಭ ಪೂಜಾರಿ

0
image_editor_output_image-541071782-1795437045373

ವಿಟ್ಲ: ಇದುವರೆಗೆ ನಿದ್ರೆಯಲ್ಲಿದ್ದ ಬಿಜೆಪಿ
ಪಂಚಾಯತಿ ಚುನಾವಣೆ ಸಂದರ್ಭದಲ್ಲಿ   ಎಚ್ಚೆತ್ತುಕೊಂಡು ರಾಜ್ಯ  ಸರಕಾರವನ್ನು ಮತ್ತು ಪುತ್ತೂರು ಕ್ಷೇತ್ರದ ಶಾಸಕರನ್ನು ಟೀಕಿಸಲು ಹೊರಟದ್ದು ಹಾಸ್ಯಾಸ್ಪದ
ಎಂದು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು


ನ.23ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 15 ನೇ ಹಣಕಾಸು ಯೋಜನೆಯಲ್ಲಿ ಚಿಕ್ಕಾಸು ಬರಲಿಲ್ಲ. 16ನೇ ಸಾಲಿನ ಹಣಕಾಸು ಯೋಜನೆಯ ಅನುದಾನವೂ ಬರಲಿಲ್ಲ. ಆದರೂ ವಿಟ್ಲದಲ್ಲಿ‌ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರು ಅನುದಾನದ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಯ ಸಂಗತಿ ಎಂದರು. ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಮಾಡದೇ  ಇನ್ನೊಂದು ಕ್ಷೇತ್ರದ ಬಗ್ಗೆ ಮಾತನಾಡುವ ಯೋಗ್ಯತೆ ಶಾಸಕ ಹರೀಶ ಪೂಂಜ ಅವರಿಗೆ ಇದೆಯೇ ಎಂದ ಅವರು ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಸರಕಾರ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿರುವುದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದರು.
ವಿಟ್ಲದಲ್ಲಿ‌ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಡಳಿತ ಇದ್ದರೂ  ಅಧ್ಯಕ್ಷ ಉಪಾಧ್ಯಕ್ಷ ರ ಸಹಿತ ಬಿಜೆಪಿ ಯ ಯಾರೊಬ್ಬರೂ ಭಾಗವಹಿಸದಿರುವುದು  ಆ ಪಕ್ಷಕ್ಕೆ ಬಡವರ ಬಗ್ಗೆ ಇರುವ ತಾತ್ಸಾರ ತೋರಿಸುತ್ತದೆ ಎಂದರು‌. ಶಾಸಕರ ಅಭಿವೃದ್ಧಿ ಕಾರ್ಯ ಸಹಿಸದ ಬಿಜೆಪಿ ಆರೋಪ ಮಾಡುತ್ತಿದೆ. ಶಾಸಕರ ಜನಪ್ರಿಯತೆಗೆ ಅವರ ಜನಮನ ಕಾರ್ಯಕ್ರಮಕ್ಕೆ ಸೇರಿದ ಜನರೇ ಸಾಕ್ಷಿ ಎಂದರು‌.


ಬಿಜೆಪಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ  ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ವಿಟ್ಲದಲ್ಲಿ‌ ಪುತ್ತೂರು ಶಾಸಕರ ಅನುದಾನದಿಂದ ನಡೆಯುತ್ರಿರುವ ಕಾಮಗಾರಿಗೆ ತಮ್ಮ ಹೆಸರಿನ ಫಲಕದಲ್ಲಿ ತಮ್ಮ ಹೆಸರು ಹಾಕಿಕೊಂಡು ಅಭಿನಂದನೆ ಹಾಕುಸಿಕೊಂಡಿರುವುದು ಮರೆತಂತಿದೆ. ಯಾವುದೇ ಅಭಿವೃದ್ಧಿ ಮಾಡದ ಬಿಜೆಪಿ ಮುಂದಿನ ಚುನಾವಣೆಗಳಲ್ಲಿ ಮತ  ಕೇಳಲು ಹೋದರೆ  ಜನರೇ ಅವರನ್ನು ಓಡಿಸಲಿದ್ದಾರೆ ಎಂದು
ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ‌ ಎಸ್. ಮಹಮ್ಮದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ ವಿಟ್ಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.‌ಕೆ .ಎಂ ಹಂಝ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You may have missed

error: Content is protected !!