ಕಾಪು: ನಿವೃತ್ತ ಶಿಕ್ಷಕಿ ಡಯಾನಾ ಡಿಸಿಲ್ವಾ ಹೃದಯಾಘಾತದಿಂದ ನಿಧನ
ಉಡುಪಿ: ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯ ನಿವೃತ್ತ ಶಿಕ್ಷಕಿ ಡಯಾನಾ ಡಿಸಿಲ್ವಾ (63) ಅವರು ನವೆಂಬರ್ 21ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶನಿವಾರ ಸಂಜೆ ಕಟಪಾಡಿಯ ಮೂಡಬೆಟ್ಟು ಸರ್ಕಾರಿಗುಡ್ಡೆಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಪತಿ, ಶಂಕರಪುರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಜಾರ್ಜ್ ಡಿಸಿಲ್ವಾ ಅವರೊಂದಿಗೆ ಚಹಾ ಸೇವಿಸಿದ್ದರು.
ಪತಿ ಚಹಾದ ಕಪ್‌ಗಳನ್ನು ಒಳಗೆ ತೆಗೆದುಕೊಂಡು ಹೋಗಲು ಎದ್ದು ಹೋದ ಸಂದರ್ಭದಲ್ಲಿ ಡಯಾನಾ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಸಹಾಯಕ್ಕಾಗಿ ಪತಿಯನ್ನು ಕೂಗಿದ್ದಾರೆ. ತಕ್ಷಣವೇ ಅವರನ್ನು ಉಡುಪಿಯ ಟಿಎಂಎ ಪೈ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಕೇವಲ ಒಂದು ವಾರದ ಹಿಂದಷ್ಟೇ ಅವರು ತಮ್ಮ ಮಗಳ ವಿವಾಹ ಸಂಭ್ರಮದಲ್ಲಿ ಅತ್ಯಂತ ಖುಷಿಯಿಂದ ಪಾಲ್ಗೊಂಡಿದ್ದರು.
ಡಯಾನಾ ಅವರು ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯಲ್ಲಿ 33 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತಿ, ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.




