November 23, 2026

ವಿಸ್ಡಮ್ ವಿದ್ಯಾಸಂಸ್ಥೆಯಲ್ಲಿ  ವಲಯ ಮಟ್ಟದ ಥ್ರೋಬಾಲ್ ಸ್ಪರ್ಧೆಯ ಸಮ್ಮಿಲನ

0
image_editor_output_image-1252020861-1795454715391

ಬಂಟ್ವಾಳ:  ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿರುವ ಮಾಣಿ ಸಮೀಪದ ಬುಡೋಳಿ ಗಡಿಯಾರ ಪರಿಸರದ ಪ್ರತಿಷ್ಠಿತ, ವಿಸ್ಡಮ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಇದರ ಕ್ಯಾಂಪಸ್ ನಲ್ಲಿ ಇತ್ತೀಚೆಗೆ, ಕಲ್ಲಡ್ಕ ವಲಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾವಳಿಗಳಲ್ಲಿ, ಹದಿನಾಲ್ಕು ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳು ಹಾಗೂ ಹದಿನೇಳು ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಒಟ್ಟು ಸುಮಾರು ಇಪ್ಪತ್ತು ಶಾಲೆಗಳು ಭಾಗವಹಿಸಿದ್ದವು.
ವಿಸ್ಡಮ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಶ್ರೀ. ಅಬ್ದುಲ್ ಖಾದರ್ ಕುಕ್ಕಾಜೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮವನ್ನು, ಶಿಕ್ಷಣ ಇಲಾಖೆಯ ವಲಯ ಸಂಪನ್ಮೂಲ ಅಧಿಕಾರಿಯವರಾದ ಶ್ರೀ ಸುಧಾಕರ ಭಟ್ ರವರು ಉದ್ಘಾಟಿಸಿದರು.
ವೇದಿಕೆಯಲ್ಲಿ PET ನೋಡಲ್ ಅಧಿಕಾರಿ ಶ್ರೀ ಜಗದೀಶ್, ಹಿರಿಯ PET ಅಧಿಕಾರಿ ಶ್ರೀ ಇಂದು ಹಿರಿಯ ದೈಹಿಕ ಶಿಕ್ಷಕರು,   ಶ್ರೀ ಭಾಸ್ಕರ ದೈಹಿಕ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಡಿಯಾರ ಹಾಗೂ ಮಾಣಿ ಕರ್ನಾಟಕ ಶಾಲಾ ನಿರ್ವಹಣಾ ಪ್ರತಿನಿಧಿ ಶ್ರೀ ಮಹೇಶ್ ರವರು ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತ ತಂಡಗಳ ವಿವರಗಳು ಇಂತಿವೆ.

1. 14 ವರ್ಷದೊಳಗಿನ ಬಾಲಕರ ವಿಭಾಗ

* ಪ್ರಥಮ ಸ್ಥಾನ: ದೇವ ಮಾತಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಅಮ್ಟೂರು

* ದ್ವಿತೀಯ ಸ್ಥಾನ: ವಿಸ್ಡಮ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಡಿಯಾರ. 

2. 14 ವರ್ಷದೊಳಗಿನ ಬಾಲಕಿಯರ ವಿಭಾಗ

* ಪ್ರಥಮ ಸ್ಥಾನ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅನಂತಾಡಿ.

* ದ್ವಿತೀಯ ಸ್ಥಾನ: ಸೈಂಟ್ ಆ್ಯಂಟನಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಅಮ್ಟೂರು.

3. 17 ವರ್ಷದೊಳಗಿನ ಬಾಲಕರ ವಿಭಾಗ

* ಪ್ರಥಮ ಸ್ಥಾನ: ದೇವ ಮಾತಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಅಮ್ಟೂರು.

* ದ್ವಿತೀಯ ಸ್ಥಾನ: ವಿಸ್ಡಮ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಡಿಯಾರ.

4. 17 ವರ್ಷದೊಳಗಿನ ಬಾಲಕಿಯರ ವಿಭಾಗ

* ಪ್ರಥಮ ಸ್ಥಾನ: ವಿಸ್ಡಮ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಡಿಯಾರ.

* ದ್ವಿತೀಯ ಸ್ಥಾನ: ಕರ್ನಾಟಕ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಾಣಿ.


ಈ ಎಲ್ಲಾ ವಿಭಾಗಗಳ ಸ್ಪರ್ಧೆಗಳ ಬಳಿಕ ಅದೇ ದಿನ ಸಂಧ್ಯಾ ಸಮಯದಲ್ಲಿ ಕಾರ್ಯಕ್ರಮದ  ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.


ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ರನ್ನರ್ಸ್ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಲಾಯಿತು.
ಭಾಗವಹಿಸಿದ ವಿವಿಧ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಮಟ್ಟದ ಕ್ರೀಡಾ ಸ್ಫೂರ್ತಿ, ಒಗ್ಗಟ್ಟು ಹಾಗೂ ಸಂಯಮದ ಮೂಲಕ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಬಹಳ ಶಿಸ್ತುಬದ್ಧತೆಯೊಂದಿಗೆ ಅತ್ಯುತ್ತಮವಾಗಿ ಪ್ರದರ್ಶಿಸಿದರು.


ವಿಸ್ಡಮ್ ವಿದ್ಯಾಸಂಸ್ಥೆಯ ಸಹಾಯಕ ಅಧ್ಯಾಪಕಿ ಶ್ರೀಮತಿ ಶಬ್ನಮ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಕೊನೆಯಲ್ಲಿ  ಶ್ರೀಮತಿ ಆಬಿದಾ ರವರು ಧನ್ಯವಾದವಿತ್ತರು.

Leave a Reply

Your email address will not be published. Required fields are marked *

You may have missed

error: Content is protected !!