ಸರಕಾರಿ ಬಸ್ ನ ಬಾಗಿಲಲ್ಲಿ ನಿಂತಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಮೃತ್ಯು
ಗದಗ: ಸರ್ಕಾರಿ ಬಸ್ ತಲೆ ಮೇಲೆ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ರಾಘವೇಂದ್ರ ಮನಿಕಟ್ಟಿ (20) ಮೃತ ವಿದ್ಯಾರ್ಥಿ. ಶಕ್ತಿಯೋಜನೆ ಪ್ರಭಾವದಿಂದ ಬಸ್ ಪೂರ್ತಿ ಪ್ರಯಾಣಿಕರು ತುಂಬಿದ್ದರು. ರಾಘವೇಂದ್ರ ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತಿದ್ದ. ಬಸ್ ಕೊಣ್ಣೂರ ನಿಲ್ದಾಣದಿಂದ ಹೊರಡುವ ವೇಳೆ ತಿರುವಿನಲ್ಲಿ ಆಯಾತಪ್ಪಿ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಬಸ್ಸಿನ ಹಿಂದಿನ ಚಕ್ರಗಳಿಗೆ ವಿದ್ಯಾರ್ಥಿ ಸಿಲುಕಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ