December 10, 2024

ವಿಟ್ಲ: ಕಂದಾಯ ನಿರೀಕ್ಷಕರಿಗೆ ಅವಾಚ್ಯವಾಗಿ ಬೈದು ಟೇಬಲ್‌ ಗ್ಲಾಸ್‌ ಒಡೆದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ: ಇಬ್ಬರ ವಿರುದ್ಧ ಪ್ರಕರಣ ದಾಖಲು

0

ವಿಟ್ಲ: ಕಂದಾಯ ನಿರೀಕ್ಷಕರ ಕಚೇರಿಗೆ ಒಳನುಗ್ಗಿ ಕಂದಾಯ ನಿರೀಕ್ಷರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ಟೇಬಲ್ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಪಡಿಸಿದ ಘಟನೆ ನ. 11 ರಂದು ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಹರೀಶ್ ರೈ ಕಲ್ಮಲೆ ಮತ್ತು ಧನಂಜಯ ಪಾದೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಟ್ಲದಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಪ್ರಶಾಂತ ಶೆಟ್ಟಿ ಕಂದಾಯ ನಿರೀಕ್ಷಕರು ಎಂಬವರು ಕೆ ಗಿರೀಶ್‌ ಶೆಟ್ಟಿರವರ ಜೊತೆ ಕರ್ತವ್ಯದಲ್ಲಿದ್ದಾಗ ವೀರಕಂಭ ಗ್ರಾಮದ ನಿವಾಸಿಗಳಾದ ಹರೀಶ್‌ ರೈ ಕಲ್ಮಲೆ ಮತ್ತು ಧನಂಜಯ ಎಂಬವರು ವೀರಕಂಭ ಗ್ರಾಮದ ಕಡತ ಸಂಖ್ಯೆ HRS/16/2021-22ರ ಬಗ್ಗೆ ಪ್ರಶ್ನಿಸುವ ನೆಪದಲ್ಲಿ ಕಚೇರಿಗೆ ಪ್ರವೇಶಿಸಿ ವಿಚಾರಿಸಿದ್ದಾರೆ.

ಈ ಕಡತವು ಶೇಕ್‌ ಸುಬಾನ್‌ ಸಂಬಂದಪಟ್ಟ 94ಸಿ ಮನೆ ನಿವೇಶನದ ಮಂಜೂರಾತಿಗೆ ಸಂಬಂದಿಸಿದ್ದು, ಈ ಕಡತವನ್ನು ಈಗಾಗಲೇ ತಾಲೂಕು ಕಚೇರಿಗೆ ವರದಿ ಮಾಡಿ ಕಳುಹಿಸಲಾಗಿದೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಬಂದಪಟ್ಟ ಕಡತದಲ್ಲಿ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಮಂಜೂರಾತಿಗೆ ಕ್ರಮ ವಹಿಸಲು ಶಿಫಾರಸ್ಸು ಮಾಡಿರುವುದರಿಂದ ಉದ್ದೇಶಪೂರ್ವಕವಾಗಿ ಮಂಜೂರಾತಿಗೆ ಅಡ್ಡಿಪಡಿಸಿರುವುದಾಗಿ ಆಪಾದಿಸಿ ಕಂದಾಯ ನಿರೀಕ್ಷಕರನ್ನು ಏಕವಚನದಿಂದ ಬೈದು, ಜೀವ ಬೆದರಿಕೆ ಹಾಕಿ, ಅವಾಚ್ಯವಾಗಿ ಶಬ್ದಗಳಿಂದ ನಿಂದಿಸಿ, ಟೇಬಲ್ ಮೇಲಿನ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಈ ಬಗ್ಗೆ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 169/2024 ಕಲಂ: 352, 351 (2),324(3),132,3 (5) BNS 2023 ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!