ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರ ಮೃತ್ಯು

ಪೆರು: ಪೆರುವಿನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಆಟಗಾರನೊಬ್ಬ ಸಾವನ್ನಪ್ಪಿದ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪೆರುವಿನ ಜುವೆಂಟುಡ್ ಬೆಲಾವಿಸ್ಟಾ ಮತ್ತು ಫ್ಯಾಮಿಲಿಯಾ ಚೊಕ್ಕಾ ಎಂಬ ಎರಡು ಕ್ಲಬ್‌ಗಳ ನಡುವಿನ ಪಂದ್ಯದ ವೇಳೆ ಈ ದುರಂತ ಘಟನೆ ಸಂಭವಿಸಿದೆ. ಕೆಲವು ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿನ ಪೋಸ್ಟ್ ಪ್ರಕಾರ, ಮಳೆಯಿಂದಾಗಿ ರೆಫರಿ ಆಟಗಾರರನ್ನ ಮೈದಾನದಿಂದ ಹೊರಹೋಗುವಂತೆ ಸೂಚಿಸಲಾಯಿತು. ಆಟಗಾರರು ಮೈದಾನದಿಂದ ಹೊರಹೋಗುತ್ತಿದ್ದಾಗ, ಸಿಡಿಲು ಬಡಿದು 39 ವರ್ಷದ ಸಾಕರ್ ಆಟಗಾರ ಜೋಸ್ ಹ್ಯೂಗೋ ಡಿ ಲಾ ಕ್ರೂಜ್ ಮೆಸಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಕೆಲವು ಆಟಗಾರರಿಗೆ ಸುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.