“ತನಗೆ ಸೂಪರ್ ಪವರ್ ಇದೆ” ಎಂದು ಹಾಸ್ಟೆಲ್‌ನ 4ನೇ ಮಹಡಿಯಿಂದ ಜಿಗಿದ ಇಂಜಿನಿಯರಿಂಗ್ ವಿದ್ಯಾರ್ಥಿ
ಕೊಯಮತ್ತೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನಗೆ ಸೂಪರ್ ಪವರ್ ಇದೆ ಮತ್ತು ತಾನು ಹಾರಬಲ್ಲೆ ಎಂದು ನಂಬಿಕೊಂಡು ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಜಿಗಿದ ಘಟನೆ ಕೊಯಮತ್ತೂರಿನಲ್ಲಿ ಬೆಳಕಿಗೆ ಬಂದಿದೆ.
ಬಿಟೆಕ್ ವಿದ್ಯಾರ್ಥಿ ತನಗೆ ಸೂಪರ್ ಪವರ್ ಇದೆ, ತಾನು ಹಾರಬಲ್ಲೆ ಎಂದು ನಂಬಿಕೊಂಡು ಹಾಸ್ಟೆಲ್‌ನಿಂದ ಜಿಗಿದಿದ್ದಾನೆ.
ಕೊಯಮತ್ತೂರು ಬಳಿಯ ಖಾಸಗಿ ಕಾಲೇಜೊಂದರ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಎ. ಪ್ರಭು ಅಕ್ಟೋಬರ್ 28ರಂದು ತನ್ನ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಮೆಕ್ಕೂರು ಗ್ರಾಮದ ಪ್ರಭು ಮೂರನೇ ವರ್ಷದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿದ್ಯಾರ್ಥಿಯಾಗಿದ್ದಾನೆ. ಅವನ ಕಾಲು, ತೋಳುಗಳಿಗೆ ತೀವ್ರ ಗಾಯಗಳಾಗಿವೆ.