February 3, 2026

ವಿಟ್ಲ: ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 59. 58.ಲಕ್ಷ ರೂ. ನಿವ್ವಳ ಲಾಭ

0
IMG-20211215-WA0007.jpg

ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ 2020-2021ನೇ ಸಾಲಿನಲ್ಲಿ 147.23 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 59.58 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ಘೋಷಿಸಿದೆ. ಬೆಳಗ್ಗೆ ಪೊನ್ನೊಟ್ಟು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ವಾರ್ಷಿಕ ಮಹಾ ಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನರಸಪ್ಪ ಪೂಜಾರಿ ಎನ್. ಹೇಳಿದರು.

2020-21ನೇ ಸಾಲಿನಲ್ಲಿ 194 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 54.99 ಲಕ್ಷ ರೂ. ಪಾಲು ಬಂಡವಾಳ ಜಮೆಯಾಗಿದೆ. ಸದ್ರಿ ವರ್ಷದಲ್ಲಿ 4970 ಎ ತರಗತಿ ಸದಸ್ಯರಿದ್ದು, 2.72 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಸರ್ಕಾರದ ಬಿ ತರಗತಿಯ 81 ಸಾವಿರ ರೂ ಪಾಲುಬಂಡವಾಳವಿದ್ದು, ಒಟ್ಟು 2.73 ಕೋಟಿ ಪಾಲು ಬಂಡವಾಳವಿದೆ. ಒಟ್ಟು ಠೇವಣಾತಿಯಲ್ಲಿ ಶೇ 18.19 ಹೆಚ್ಚಳವಾಗಿದೆ ಎಂದು ಅವರು ಬುಧವಾರ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಸಂಘದ ಸದಸ್ಯರ ಅವಶ್ಯಕತೆಗೆ ಅನುಗುಣವಾಗಿ ೨೫.೩೩ ಕೋಟಿ ಸಾಲ ನೀಡಿದ್ದು, ಇದರಲ್ಲಿ ಮಂಗಳಾ ಕಿಸಾನ್ ಕಾರ್ಡ್ ಹೊಂದಿದ ರೈತ ಸದಸ್ಯರಿಗೆ ೧೧.೦೬ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಶೇ.೯೪.೦೩ ರಷ್ಟು ವಸೂಲಾತಿ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ೨೪.೨೩ಲಕ್ಷ ಎಸ್ ಟಿ ಸಾಲಗಳ ಬಡ್ಡಿ ಹಾಗೂ ೯.೩೦ಲಕ್ಷ ಯಂ ಟಿ ಸಾಲಗಳ ಬಡ್ಡಿ ಮತ್ತು ೨.೦೮ಲಕ್ಷ ಯಸ್ ಯಚ್ ಜಿ ಸಾಲದ ಬಡ್ಡಿ ಹಾಗೂ ಕೇಂದ್ರ ಸರ್ಕಾರದಿಂದ ೧,೦೯,೪೮,೫೩೯ ರೂ ಬಡ್ಡಿ ಬರಲು ಬಾಕಿ ಇದೆ. ಆಹಾರ ಧಾನ್ಯ, ಸೀಮೆ ಎಣ್ಣೆ, ಕೊಂಕಣ ಗ್ಯಾಸ್, ರಾಸಾಯನಿಕ ಗೊಬ್ಬರ, ಕೀಟನಾಶಕಗಳು ೫೭.೩೨ಲಕ್ಷ ರೂ ಮೌಲ್ಯದ್ದು ಮಾರಾಟವಾಗಿದ್ದು, ೬.೭೮ಲಕ್ಷ ರೂ. ಲಾಭ ಬಂದಿದೆ ಎಂದು ತಿಳಿಸಿದರು.

ವಿಟ್ಲ ಪ್ರಧಾನ ಕಛೇರಿಯ ಹಾಗೂ ಕುಂಡಡ್ಕ ಶಾಖೆಯಲ್ಲಿ ಮೇಲ್ಚಾವಣಿಯನ್ನು ನಿರ್ಮಾಣಮಾಡಿದ್ದು, ಗೋದಾಮು ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕೋವಿಡ್ ೧೯ ನಡುವೆಯೂ ರೈತರು ಉತ್ತಮ ರೀತಿಯಲ್ಲಿ ಸಂಸ್ಥೆಯ ಜತೆಗೆ ಸ್ಪಂದನೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ನಿರ್ದೇಶಕರಾದ ಉದಯ ಕುಮಾರ್, ದಯಾನಂದ ಶೆಟ್ಟಿ ಉಜಿರೆಮಾರ್, ಸದಾನಂದ ಗೌಡ, ರಾಘವೇಂದ್ರ ಪೈ, ದಿನೇಶ ಕೆ., ವಾಸು ಸಿ. ಎಚ್., ಶಿವಪ್ಪ ನಾಯ್ಕ, ಅಚ್ಯುತ್ ನಾಯಕ್, ಗೌರಿ ಎಸ್. ಎನ್. ಭಟ್, ಸಂಗೀತಾ ಎನ್., ಕವಿತಾ ಕೆ. ಎಲ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಕೆ. ಪಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!