ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ 35.63 ಲಕ್ಷ ನಿವ್ವಳ ಲಾಭ: ಶೇ.10 ಡಿವಿಡೆಂಡ್ ಘೋಷಣೆ
ವಿಟ್ಲ: ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ 2020 ಮತ್ತು 2021 ನೇ ಸಾಲಿನ ಆರ್ಥಿಕ ವರ್ಷದಲ್ಲಿ 42, 44,52,97 ರೂ.ಗಳ ವ್ಯವಹಾರ ದಾಖಲಿಸಿ ೩೫,೬೩,೭೬೭ 35,93,792 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಎನ್. ತಿಳಿಸಿದರು. ಸದಸ್ಯರಿಗೆ ಈ ಲಾಭಾಂಶದಲ್ಲಿ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.
ಅವರು ಬುಧವಾರ ವಿಟ್ಲದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಪುಣಚ ಶಾಖೆಯಲ್ಲಿ ಉತ್ತಮ ಆರ್ಥಿಕ ವ್ಯವಹಾರ ನಡೆಯುತ್ತಿದೆ. ಸಹಕಾರಿ ಸಂಘದಲ್ಲಿ ಹಿರಿಯ ನಾಗರಿಕರಿಗೆ, ಯೋಧರಿಗೆ, ಸಹಕಾರಿ ಸಂಘಗಳಿಗೆ ಹಾಗೂ ಸೋಂದಾಯಿತ ಸಂಘ ಸಂಸ್ಥೆಯಗಳಿಗೆ, ವಾಯಿದೆ ಠೇವಣಿಗಳಿಗೆ 0.5ಅಧಿಕ ಬಡ್ಡಿ ನೀಡಲಾಗುತ್ತಿದೆ. ಸಂಘವು ಇ-ಸ್ಟ್ಯಾಂಪ್ ಸೌಲಭ್ಯ ಹೊಂದಿದೆ ಎಂದ ಅವರು ಮುಂದಿನ ಯೋಜನೆಯಲ್ಲಿ ಸಂಘದ ಸ್ವಂತ ಕಟ್ಟಡ, ಕಾರ್ಯವ್ಯಾಪ್ತಿಯಲ್ಲಿ ಶಾಖೆಗಳನ್ನು ತೆರೆಯುವ ಚಿಂತನೆಯಿದೆ. ೧೦.೫೦ ಠೇವಣಾತಿ ಸಂಗ್ರಹ ಹಾಗೂ ೧೦.೨೫ ಸಾಲ ನೀಡುವ ಗುರಿ ಹೊಂದಿದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಡಾ.ಗೀತಪ್ರಕಾಶ್ ಮಾತನಾಡಿ ಸಂಘ ಕೇವಲ ಆರ್ಥಿಕ ಕ್ರೋಢೀಕರಣಕ್ಕೆ ಒತ್ತು ನೀಡದೇ ಸಾಮಾಜಿಕ ಕಳಕಳಿಯಿಂದ ವ್ಯವಹಾರ ನಡೆಸುತ್ತಿದೆ ಎಂದರು.
ವಿಟ್ಲ ಗ್ರಾಮೀಣ ಬ್ಯಾಂಕ್ ನ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್ ಕಾರ್ಯಕ್ರಮ ಉದ್ಘಾಟಿಸಿದರು.
ರಮೇಶ್ ಕುಮಾರ್ ಪಿ, ರಾಘವ ಪೂಜಾರಿ, ಜಗದೀಶ ವಿ, ಅಭಿಜಿತ್ ಜೆ, ಜಗದೀಶ ವಿ, ವನಿತಾ ಚಂದ್ರಹಾಸ್, ಪುಷ್ಪ ಸುಂದರ ಪೂಜಾರಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಸಂಜೀವ ಪೂಜಾರಿ ಎಂ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ್ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಬಾಬು ಕೆ.ವಿ ವಂದಿಸಿದರು. ಸರಿತಾ ರೂಪರಾಜ್ ಕಾರ್ಯಕ್ರಮ ನಿರೂಪಿಸಿದರು.





