ರಷ್ಯಾದ ಗನ್ ಪೌಡರ್ ಕಾರ್ಖಾನೆಯಲ್ಲಿ ಸ್ಫೋಟ:
16 ಮಂದಿ ಮೃತ್ಯು
ಮೋಸ್ಕೋ: ರಷ್ಯಾದ ಪಶ್ಚಿಮ ರಿಯಾಜಾನ್ ಪ್ರಾಂತ್ಯದ ಗನ್‌ಪೌಡರ್ ಮತ್ತು ರಾಸಾಯನಿಕಗಳ ಸ್ಥಾವರದಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 16 ಜನರು ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿಯನ್ನು ಗಂಭೀರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೆಸರುಗಳ ಪಟ್ಟಿಯ ಪ್ರಕಾರ, ದುರಂತದ ಸಮಯದಲ್ಲಿ ಸೈಟ್‌ನಲ್ಲಿದ್ದ 17 ಕಾರ್ಮಿಕರ ಸಂಪೂರ್ಣ ಶಿಫ್ಟ್ ಅಲ್ಲಿ ಇದ್ದರು ಎಂದು ತಿಳಿಸಿದೆ.
ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ಕಾರ್ಯಕರ್ತರು ಮತ್ತು ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದೆ. ಸ್ಪೋಟಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





