March 21, 2026

ತಮಟೆ ಬಾರಿಸಿದ್ದಕ್ಕಾಗಿ ದಲಿತ ವ್ಯಕ್ತಿಗೆ  ಥಳಿತ:
ಐವರ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲು

0
image_editor_output_image-1474630083-1639460944428.jpg

ಹಾಸನ: ತಮಟೆ ಬಾರಿಸಿದ್ದಕ್ಕಾಗಿ ದಲಿತ ವ್ಯಕ್ತಿಯನ್ನು ಜಾತಿವಾದಿಗಳು ಥಳಿಸಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ನೆಲಮಂಗಲ ತಾಲ್ಲೂಕಿನ ಮೊದಲಕೋಟೆ ನಿವಾಸಿ ನಾರಾಯಣಸ್ವಾಮಿಯವರು ಸುಮಾರು ಹದಿನೈದು ಜನರ ಮೇಲೆ ದೂರು ನೀಡಿದ್ದು, ಐವರ ಮೇಲಷ್ಟೇ ಪ್ರಕರಣ ದಾಖಲಾಗಿದೆ.

ಡಿ.12ರಂದು‌ ಮಧ್ಯಾಹ್ನ ಸುಮಾರು 12.15ರ ಸಮಯದಲ್ಲಿ ನಾನು ನನ್ನ ಆಟೋದಲ್ಲಿ ಊರಿನ (ಮೊದಲಕೋಟೆ) ಪ್ರೌಢಶಾಲೆಯ ರಸ್ತೆಯ ಮೂಲಕ ನಾನು ಹಾಗೂ ನನ್ನ ಸ್ನೇಹಿತ ವಿಶ್ವ ಎನ್ನುವವರು ತೆರಳುತ್ತಿದ್ದೆವು. ನನ್ನ ಆಟೋದಲ್ಲಿ ತಮಟೆ ಒಂದನ್ನು ಇಟ್ಟಿಕೊಂಡಿದ್ದೆವು. ಅಕಸ್ಮಾತ್‌ ಆಗಿ ಕೆಲವು ಸೆಕೆಂಡ್‌ ತಮಟೆಯನ್ನು ಭಾರಿಸಿದ್ದು ಮೇಲ್ಜಾತಿಯ ಜನರು ಥಳಿಸಲು ಕಾರಣವಾಗಿದೆ” ಎಂದು ಅವರು ದೂರಿದ್ದಾರೆ.

“ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದರಾಜು (ಗೋವಿ) ಅವರ ಮನೆ ಅಲ್ಲಿಯೇ ಸಮೀಪದಲ್ಲೇ ಇತ್ತು. ತಮಟೆ ಬಾರಿಸಿದಾಗ ಗೋವಿಂದರಾಜು ಹಾಗೂ ಅವರ ಪತ್ನಿ, ಸಂಬಂಧಿಗಳಾದ ರಾಜ, ಮೂರ್ತಿ ಹಾಗೂ ಅವರ ಪತ್ನಿ, ನಾಗರಾಜು, ರಂಗಣ್ಣ ಹಾಗೂ ಅವರ ಪತ್ನಿ, ಶಿವ ಹಾಗೂ ಅವರ ಪತ್ನಿ ಶಶಿಕಲಾ, ಗೋವಿಂದರಾಜು ಅವರ ತಾಯಿ, ಶಂಕರ್‌, ರಂಗಮ್ಮ ಅವರು ನನ್ನನ್ನು ಅಡ್ಡಗಟ್ಟಿ, ಜಾತಿ ನಿಂದನೆ ಮಾಡಿ, ಅಸಂವಿಧಾನಿಕ ಪದಗಳಿಂದ ಬೈದು ನನ್ನನ್ನು ಥಳಿಸಿದ್ದಾರೆ” ಎಂದು ನಾರಾಯಣಸ್ವಾಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!