February 3, 2026

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‍ನಲ್ಲಿ ಹಿಡನ್ ಕ್ಯಾಮೆರಾ ಪತ್ತೆ

0
image_editor_output_image-32182070-1725084018721.jpg

ಅಮರಾವತಿ: ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿನಿಯರ ಹಾಸ್ಟೆಲ್‍ನ ವಾಶ್ ರೂಂನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದ್ದು, ವಿಡಿಯೋ ಸೆರೆ ಹಿಡಿದು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃಷ್ಣನ್ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಈ ಪ್ರಕರಣ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಸಂಜೆ ವಾಶ್‍ರೂಮ್‍ನಲ್ಲಿ ಮುಚ್ಚಿಟ್ಟಿದ್ದ ವಸ್ತುವನ್ನು ವಿದ್ಯಾರ್ಥಿನಿ ಗಮನಿಸಿದ್ದಾಳೆ. ಆ ವಸ್ತುವನ್ನು ನೋಡಿದಾಗ ಕ್ಯಾಮೆರಾ ಇರುವುದು ಪತ್ತೆಯಾಗಿದೆ. ಕ್ಯಾಮೆರಾ ಪರಿಶೀಲಿಸಿದಾಗ ವಿಡಿಯೋಗಳನ್ನು ನೋಡಿ ಪ್ರತಿಭಟನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!