February 3, 2026

ಪಡುಬಿದ್ರಿ ಬೀಚ್‌ನಲ್ಲಿ ಅಸಭ್ಯವಾಗಿ ಫೋಟೊ ಶೂಟ್: ಸ್ಥಳೀಯರ ವಿರೋಧ

0
image_editor_output_image-1537272599-1725083832403.jpg

ಉಡುಪಿ: ನಾಲ್ಕು ದಿನಗಳ ಹಿಂದೆ ಪಡುಬಿದ್ರಿ ಬೀಚ್‌ನಲ್ಲಿ ಮುಂಬೈ ಮೂಲದ ಯೂಟ್ಯೂಬರ್ ಓರ್ವಳು ಅಸಭ್ಯವಾಗಿ ಫೋಟೋ ಶೂಟ್ ನಡೆಸುತ್ತಿದ್ದುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಹೆಸರಿನಲ್ಲಿ ಸಂಸ್ಕೃತಿಯ ಎಲ್ಲೆ ದಾಟದಂತೆ ಸ್ಥಳೀಯ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಯೂಟ್ಯೂಬರ್ ಖ್ಯಾತಿಶ್ರೀ ಪೊಲೀಸರ ವಿರುದ್ಧ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಆಕೆ, ತಾನು ಪತಿಯ ಜತೆ ಬಂದು ಫೋಟೋ ಚಿತ್ರೀಕರಿಸುತ್ತಿದ್ದಾಗ ಪೊಲೀಸರೇ ಬಂದು ಎಚ್ಚರಿಸಿದ್ದಾರೆ. ಪಡುಬಿದ್ರಿಯಂಥ ಸುರಕ್ಷಿತ ಬೀಚ್‌ನಲ್ಲಿ ತನಗೆ ಹೀಗಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಯುವತಿಯ ಪೋಸ್ಟ್ಗೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!