February 3, 2026

ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿತ: ಆರೋಪಿಯ ಬಂಧನ

0
image_editor_output_image-657947320-1725083689171.jpg

ಕುಣಿಗಲ್: ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದು ಪರಾರಿ ಆಗುವಾಗ ಪ್ರೇಮಿಯನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ನೀಡಿದ ಘಟನೆ ಪಟ್ಟಣದ ದೊಡ್ಡಪೇಟೆ ಬಳಿ ನಡೆದಿದೆ.

ಮಂಡ್ಯದ ಆದೀಲ್ (23) ಚಾಕುವಿನಿಂದ ಇರಿದ ಆರೋಪಿ. ಪಟ್ಟಣದ ಕೋಟೆ ನಿವಾಸಿ ಮಹಮದ್ ಆಲೀಸಾ ಖಾದ್ರಿ (21) ಮಂಗಳಮುಖಿಯಾಗಿ ಬದಲಾಗಿದ್ದು, ಹನೀಶಾ ಎಂದು ಹೆಸರು ಇಟ್ಟುಕೊಂಡಿದ್ದು, ಚಾಕು ಇರಿತಕ್ಕೆ ಒಳಗಾದ ಪ್ರೇಯಸಿ.

ಕಳೆದ ಆರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಮಂಗಳಮುಖಿ ಹನೀಶಾ ಮಂಡ್ಯದ ಆದೀಲ್‌ಗೆ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿತ್ತು. ಪ್ರೇಮಿ ಆದೀಲ್ ಕುಣಿಗಲ್ ಹನಿಶಾ ಮನೆಗೆ ಬಂದು ಅನಾಥ ಎಂದು ಸುಳ್ಳು ಹೇಳಿ ಕಳೆದ ನಾಲ್ಕು ಐದು ತಿಂಗಳಿನಿಂದ ವಾಸವಾಗಿದ್ದನು. ಮನೆಯ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರ ಪ್ರೀತಿಯಲ್ಲಿ ವ್ಯತ್ಯಾಸ ಉಂಟಾಗಿ ಕೆಲ ವಿಚಾರವಾಗಿ ಹನೀಶಾ ಹಾಗೂ ಆದೀಲ್ ನಡುವೆ ಜಗಳ ನಡೆಯುತ್ತಿತ್ತು.

Leave a Reply

Your email address will not be published. Required fields are marked *

error: Content is protected !!