August 11, 2026

ಸುರತ್ಕಲ್: ವಿದ್ಯುತ್ ತಂತಿ ಸ್ಪರ್ಶಿಸಿ ಗುತ್ತಿಗೆದಾರ ಮೃತ್ಯು

0
image_editor_output_image-1916379453-1786436740656

ಸುರತ್ಕಲ್: ಕೃಷ್ಣಾಪುರ 6ನೇ ಬ್ಲಾಕ್ ಪ್ಲಾಝ ಅಪಾರ್ಟ್ಮೆಂಟ್ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗುತ್ತಿಗೆದಾರ ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ನಡೆದಿದೆ. ಮೃತರನ್ನು ಭಾಸ್ಕರ್ ಜಿ ಕರ್ಕೇರ ಎಂದು ಹೆಸರಿಸಲಾಗಿದೆ.
ಅಪಾರ್ಟ್ಮೆಂಟ್ ಮೇಲ್ಭಾಗದಲ್ಲಿ ಹಾದು ಹೋಗಿರುವ ತಂತಿ ಸ್ಪರ್ಶಿಸಿ ಶೀಟ್ ಅಳವಡಿಸುವ ಕೆಲಸ ಮಾಡುತ್ತಿದ್ದ ಭಾಸ್ಕರ್ ಜಿ ಕರ್ಕೇರ(65) ಮೃತಪಟ್ಟಿದ್ದಾರೆ. ಜಿಮ್ ಇಕ್ಬಾಲ್ ಕೆಲಸ ಮಾಡಿಸುತ್ತಿದ್ದು ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಸಲಕರಣೆ ಒದಗಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!