February 3, 2026

ಮೂಡಬಿದ್ರಿ: ಪ್ರೀತಿಸುವಂತೆ ಒತ್ತಾಯಿಸಿ, ಯುವತಿಗೆ ಹಲ್ಲೆ ಪ್ರಕರಣ ಆರೋಪಿಯ ಬಂಧನ

0
image_editor_output_image291816966-1725076764878

ಮೂಡುಬಿದ್ರಿ: ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೊಬ್ಬಳಿಗೆ ಹಲ್ಲೆಗೈದ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯಲ್ಲಿ ಗುರುವಾರ ರಾತ್ರಿ 8:00 ಗಂಟೆಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಇರುವೈಲಿನ ಅರ್ಶದ್ (21) ಎಂಬವನಾಗಿದ್ದಾನೆ.

ಮೂಡುಬಿದ್ರಿಯ ಕೋಟೆಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಕೋಟೆಬಾಗಿಲಿನ ಯುವತಿಯೊಬ್ಬಳು ಪರಿಚಯವಾಗಿದ್ದು, ಮುಂದೆ ಅವರಿಬ್ಬರ ನಡುವೆ ಹಲವು ಬಾರಿ ಫೋನ್ ಸಂಭಾಷಣೆ ನಡೆದಿತ್ತೆಂಬ ವಿಚಾರವೂ ಬಯಲಾಗಿದೆ. ಕೋಟೆಬಾಗಿಲಿನ ಯುವತಿ ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆ ರಸ್ತೆಯ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೆಲಸಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಅರ್ಶದ್ ನೊಂದಿಗೆ ಫೋನ್ ಸಂಭಾಷಣೆಯ ಎಡವಟ್ಟಿನಿಂದಾಗಿ ಮನೆಮಂದಿ ಆಕೆಯನ್ನು ಕೆಲಸಕ್ಕೆ ಕಳುಹಿಸಿದೇ ಮನೆಯಲ್ಲಿ ಇರಿಸಿದ್ದರು.

ಈ ನಡುವೆ ಆಕೆಯನ್ನು ಉಡುಪಿಯಲ್ಲಿ ಇರುವ ಆಕೆಯ ಸಹೋದರಿಯ ಮನೆಗೆ ಹೆತ್ತವರು ಕಳುಹಿಸಿಕೊಟ್ಟಿದ್ದರು. ಕಳೆದ ಕೆಲ ದಿನಗಳ ಹಿಂದೆ ಆಕೆ ಊರಿಗೆ ಹಿಂದಿರುಗಿದ್ದು, ಗುರುವಾರ ಸಂಜೆ ಮೂಡುಬಿದಿರೆ ಪೇಟೆ ಹೋಗಿದ್ದ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯ ಬಳಿ ಟೈಲರ್ ಅಂಗಡಿ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅರ್ಶದ್ ಯುವತಿಯನ್ನು ಅಡ್ಡಗಟ್ಟಿದ್ದಾನೆ.

ಮೊಬೈಲ್ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ತೋರುತ್ತಿರುವ ಹಾಗೂ ತನ್ನನ್ನು ತಿರಸ್ಕರಿಸುತ್ತಿರುವ ಕುರಿತು ಅಕ್ಷೇಪ ವ್ಯಕ್ತ ಪಡಿಸಿದ ಆರೋಪಿ ಅರ್ಶದ್ ಸಾರ್ವಜನಿಕ ರಸ್ತೆಯಲ್ಲಿ ಯುವತಿಗೆ ಹಲ್ಲೆ ನಡೆಸಿದ್ದಾನೆ. ಕಾರ್ಯಪ್ರವೃತ್ತರಾದ ಮೂಡಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಗೆ ಅಗತ್ಯ ರಕ್ಷಣೆ ನೀಡಲು ಪೊಲೀಸರು ಬದ್ದರೆಂದು ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ.ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!